ಹೆಣ್ಣಿನ ಮೋಹಕ ಕಣ್ಣಿಗೆ ಕಾಡಿಗೆಯ ಟಚ್ : ಐ-ಮೇಕಪ್‌ಗೆ ಈ ಐಟಂ ತಪ್ಪದೆ ಬಳಸಿ..

0

ಹೆಣ್ಣು ಸೌಂದರ್ಯದ ಕಣ್ಣು.. ಆಕೆಯ ಕಣ್ಣಿನಲ್ಲಿ ಸೌಂದರ್ಯದ ಸೆಳೆತ ಇರುತ್ತೆ..ಹೀಗಾಗಿಯೇ ಬಲ್ಲವರು ಹೆಣ್ಣಿನ ಕಣ್ಣನ್ನ ಕಮಲ, ಮೀನು ಅಂತೆಲ್ಲ ವರ್ಣಿಸಿ ಬಣ್ಣಿಸಿದ್ದಾರೆ. ಅದರಲ್ಲೂ ಕಣ್ಣಿಗೆಗೆ ಕಪ್ಪು ಕಾಡಿಗೆ ಸೇರಿದ್ರೆ ಎಂತವರನ್ನಾದ್ರೂ ಒಮ್ಮೆಗೆ ಸೆಳೆದು ಬಿಡುವ ಮಾಯಜಾಲ ಆ ಕಣ್ಣಿಗಿದೆ. ಕಣ್ಣು ಅಂತ ಬಂದಾಗ ಹಿಂದೆಲ್ಲ ಕಪ್ಪು ಕಾಡಿಗೆ ಮಾತ್ರ ಬಳಸ್ತಾ ಇದ್ರು. ಈ ಕಾಡಿಗೆ ಕಣ್ಣಿನ ಆರೋಗ್ಯವನ್ನು ಕೂಡಾ ಕಾಪಾಡುತ್ತದೆ ಅನ್ನೋದನ್ನ ಮರೆಯುವಂತಿಲ್ಲ. ಆದ್ರೆ ಈಗ ಕಣ್ಣಿನ ಸೌಂದರ್ಯವನ್ನ ಹೆಚ್ಚಿಸೋದಿಕ್ಕೆ ಹತ್ತಾರು ಬಗೆಯ ಸ್ಟೈಲೀಶ್ ಮೇಕಪ್‌ಗಳು ಮಾರುಕಟ್ಟೆಯಲ್ಲಿ ಕಮಾಲ್ ಮಾಡ್ತಾ ಇದೆ.


ಪ್ರತಿಯೊಬ್ಬ ಹೆಣ್ಣು ತಾನು ಸುಂದರವಾಗಿ ಕಾಣಬೇಕೆಂದು ಬಯಸ್ತಾಳೆ, ಹಾಗಾಗಿ ಮೇಕಪ್ ಮಾಡೋ ಹೊತ್ತಿಗೆ ಕಣ್ಣುಗಳ ಬಗ್ಗೆಯೂ ಗಮನ ಕೊಡುತ್ತಾರೆ. ನೀವು ಸುಂದರವಾಗಿ ಕಾಣಬೇಕಾದ್ರೆ ಕಣ್ಣಿನ ಮೇಕಪ್ ಹೇಗಿರಬೇಕು ಅನ್ನೋದನ್ನ ಇಂದಿನ ಬರವಣಿಗೆಯಲ್ಲಿ ನೋಡೋಣ, ಅದಕ್ಕೂ ಮೊದಲು ಕಣ್ಣಿಗೆ ಹಚ್ಚುವ ಕಾಡಿಗೆಯ ಬಗ್ಗೆ ತಿಳಿದುಕೊಳ್ಳೋಣ. ಈ ಕಪ್ಪು ಕಾಡಿಗೆ ಸುಮಾರು 5000 ವರ್ಷಗಳ ಪುರಾತನ ಇತಿಹಾಸ ಹೊಂದಿದ್ದು, ಔಷಧ ತಯಾರಿಕೆಯಲ್ಲಿ ಮತ್ತು ಸೌಂದರ್ಯ ಕಾಪಾಡಲು ಬಳಸುತ್ತಿದ್ದರು. ತುಪ್ಪ, ತರಕಾರಿ ಎಣ್ಣೆ, ಕರ್ಪೂರವನ್ನು ಬಳಸಿ ಕಾಡಿಗೆಯನ್ನು ಮನೆಯಲ್ಲೇ ತಯಾರಿಸುತ್ತಿದ್ದರು ಅನ್ನದು ವಿಶೇಷ. ಅಲ್ಲದೆ ಆಯುರ್ವೇದದಲ್ಲೂ ಕಾಡಿಗೆಗೆ ಮಹತ್ವದ ಸ್ಥಾನವಿದೆ. ನೈಸರ್ಗಿಕವಾಗಿ ತಯಾರಿಸುವ ಕಾಡಿಗೆಯಲ್ಲಿ ಹರಳೆಣ್ಣೆಯನ್ನು ಉಪಯೋಗಿಸುವುದರಿಂದ ಕಣ್ಣನ್ನು ತಂಪಾಗಿರಿಸಲು ನೆರವಾಗುತ್ತದೆ. ಶುದ್ಧ ಹರಳಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ಕಣ್ಣಿನ ರೆಪ್ಪೆ ದಪ್ಪ ಹಾಗೂ ಕಪ್ಪಾಗಿರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಕಣ್ಣಿನ ಆರೋಗ್ಯವನ್ನ ವೃದ್ಧಿಸಿ ಕಣ್ಣಿಗೆ ತಂಪನ್ನ ನೀಡುತ್ತದೆ ಎನ್ನೋದು ಹಿರಿಯರ ಮಾತು.


ಈಗ ಬ್ಯೂಟಿಫುಲ್ ಲೇಡೀಸ್ ತಮ್ಮ ಬ್ಯೂಟಿಫುಲ್ ಐ ಮೇಕಪ್ ಹೇಗೆ ಮಾಡಿಕೊಂಡ್ರೆ ಮುದ್ದಾಗಿ ಕಾಣಿಸುತ್ತಾರೆ ಅನ್ನೋದನ್ನ ನೋಡೋಣ. ಫ್ಯಾಶನ್ ಲೋಕದಲ್ಲಿ ತರಹೇವಾರಿ ಬ್ರ್ಯಾಂಡೆಂಡ್ ಐ-ಮೇಕಪ್ ಐಟಂಗಳು ಸಿಗುತ್ತೆ.. ಅನೇಕರಿಗೆ ಯಾವುದನ್ನ ಕೊಂಡುಕೊಳ್ಳೋದು ಯಾವುದನ್ನ ಬಳಸಿದ್ರೆ ಉತ್ತಮ ಅನ್ನೋ ಡೌಟ್ ಇರುತ್ತದೆ.. ಹೀಗಾಗಿ ನೀವು ಐ ಮೇಕಪ್ ಐಟಂಗಳನ್ನ ಖರೀದಿಸುವಾಗ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಉತ್ಪನ್ನಗಳಿಗೆ ಮೊದಲ ಆದ್ಯತೆ ನೀಡಿ. ಅದು ಕಣ್ಣಿಗೂ ಹಿತವನ್ನ ಕೊಡುತ್ತದೆ.

  • ಯಾವುದೇ ಶುಭ ಕಾರ್ಯಕ್ರಮ ಇದ್ದಾಗ ಬೇಸಿಕ್ ಮೇಕಪ್ ಜೊತೆಗೆ ಸೌಂದರ್ಯದ ಗಣಿಯಂತಿರೋ ನಮ್ಮ ಕಣ್ಣಿಗೆ ಇನ್ನಷ್ಟು ಸೌಂದರ್ಯ ಸೇರೋವಂತೆ ಮೇಕಪ್ ಹೇಗೆ ಮಾಡಬೇಕು ಅನ್ನೋದನ್ನ ನೋಡೋಣ..
  • ಕಣ್ಣಿಗೆ ಕಪ್ಪು ಅಥವ ಇತರೆ ಬಣ್ಣದ ಶೇಡ್ ಹಚ್ಚುವ ಮೊದಲು ನೀವು ಮಾಡಬೇಕಾಗಿರುವುದು ಕಣ್ಣಿನ ಕಾಳಜಿ. ಹಾಗಾಗಿ ಕಣ್ಣಿನ ಸುತ್ತಲು ಐ ಪ್ರೈಮರ್ ಹಚ್ಚಬೇಕು. ಇದು ನಿಮ್ಮ ಕಣ್ಣಿನ ರೆಪ್ಪೆಯ ಸುತ್ತಲೂ ಮೃದುವಾದ ಚರ್ಮದ ಮೇಲ್ಮೈಯನ್ನು ರಚಿಸಲು ಸಹಾಯ ಮಾಡುತ್ತದೆ. ಮೊದಲು ಸ್ವಲ್ಪ ಪ್ರಮಾಣದ ಐ ಪ್ರೈಮರ್ ಅನ್ನು ನಿಮ್ಮ ಕಣ್ಣಿಗೆ ಬಳಸಿ, ಸ್ವಲ್ಪ ಸಮಯದವರೆಗೆ ಒಣಗಳು ಬಿಡಿ. ನಂತರ ಐ ಶ್ಯಾಡೋ ಅಥವಾ ಕನ್ಸೀಲರ್ ಅನ್ನು ಬಳಸಿ.
  • ಮುಖ್ಯವಾಗಿ ಕಣ್ಣಿನ ಮೇಕಪ್ ಬ್ರಷ್ ಗಳು ಇತರ ಮೇಕಪ್ ಬ್ರಷ್ ಗಳಿಗಿಂತ ಭಿನ್ನವಾಗಿರುತ್ತದೆ. ನೀವು ಸಣ್ಣದಾದ ಬ್ರಷ್ ಅನ್ನು ಬಳಸಿ. ಏಕಂದರೆ ಇಂತಹ ಬ್ರಷ್ ಬಳಸುವುದರಿಂದ ಅಪ್ಲಿಕೇಶನ್‌ಗೆ ಯಾವುದೇ ತೊಂದರೆಯಾಗುವುದಿಲ್ಲ. ಅನೇಕ ಮೇಕಪ್ ಎಕ್ಸ್‌ಪರ್ಟ್ಸ್ ಗಳಂತೆ ನೀವು ಕೂಡ ಐ ಮೇಕಪ್ ಮಾಡಿಕೊಳ್ಳಬಹುದು.
  • ಈ ಮೇಲಿನ ಹಂತ ಮುಗಿದ ನಂತರ, ನಿಮ್ಮ ಕಣ್ಣಿಗೆ ಸರಿಹೊಂದುವಂತಹ ಬೇಸಿಕ್ ಶೇಡ್ಸ್ ಹಚ್ಚುವ ಸಮಯ. ಬಿಳಿ ಬಣ್ಣದ ತ್ವಚೆಗೆ ಬ್ಲಾಕ್ ಬಣ್ಣದ ಐಲೈನರ್‌ನ್ನ ಬೇಸಿಕ್ ಶೇಡ್ಸ್ ಆಗಿ ಬಳಸಿ, ಇದು ನಿಮ್ಮ ಕಣ್ಣನ್ನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.
  • ಈ ಬಳಿಕ ನೀವು ಆಯ್ಕೆ ಮಾಡಿಕೊಂಡ ಬಣ್ಣದೊಂದಿಗೆ ಕಣ್ಣಿನ ಹೊರಗೆ ಚಾಚಿರುವ ಅಂದರೆ ರೆಪ್ಪೆಯ ಮೇಲಿನಿಂದ ಸ್ವಲ್ಪ ದಪ್ಪಗೆ ನಿಮ್ಮ ಆಯ್ಕೆಯ ಐಲೈನರ್ ಹಚ್ಚಿ.. ರೆಪ್ಪೆಯ ಆರಂಭದ ಭಾಗದಲ್ಲಿ ಸ್ವಲ್ಪ ತೆಳುವಾಗಿ ಹಾಗೂ ಮಧ್ಯಭಾಗದಲ್ಲಿ ದಪ್ಪವಾಗಿ ಹಚ್ಚಿ ಕೊನೆಯ ಭಾಗವನ್ನ ತೆಳುವಾಗಿ ಎಳೆಯಿರಿ. ಹಾಗೆಯೇ ಕಣ್ಣಿನ ಕೆಳಗೂ ತೆಳುವಾಗಿ ಐಲೈನರ್ ಹಚ್ಚಿ. ಈಗ 60% ನಿಮ್ಮ ಕಣ್ಣಿನ ಮೇಕಪ್ ಮುಗಿದಿದೆ.
  • ಇನ್ನು 40% ಇರೋದು.. ಇದು ರೆಪ್ಪೆಗೂದಲ ಅಂದವನ್ನು ಹೆಚ್ಚಿಸೋದಕ್ಕಾಗಿ ನಿಧಾನವಾಗಿ ಮಸ್ಕರಾವನ್ನು ಬಳಸಿ. ಮಸ್ಕರಾ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸುವ ಉತ್ಪನ್ನ. ಇದನ್ನು ಅನ್ವಯಿಸುವುದರ ಮೂಲಕ ಕಣ್ಣಿನ ಆಕರ್ಷಣೆಯನ್ನು ಹೆಚ್ಚಿಸಬಹುದು. ಆಕರ್ಷಕ ಹಾಗೂ ಉದ್ದವಾದ ಕಣ್ಣಿನ ರೆಪ್ಪೆಗಳು ಸುಂದರ ನೋಟವನ್ನು ನೀಡುತ್ತದೆ. ಮಸ್ಕರಾವನ್ನು ಕಣ್ಣಿನ ಕೆಳಗಿನ ರೆಪ್ಪೆ ಹಾಗು ಮೇಲಿನ ರೆಪ್ಪೆಗೆ ಅನ್ವಯಿಸಿ. ಸ್ವಲ್ಪ ಸಮಯದವರೆಗೆ ಒಣಗಲು ಬಿಡಿ.
  • ಮಸ್ಕರಾ ಹಚ್ಚುವ ಮೊದಲು ನೀವು ಕಣ್ಣನ ಮೇಲ್ಪಾಗದ ರೆಪ್ಪೆಗೆ ನಿಮ್ಮ ಬಟ್ಟೆಗೆ ಮ್ಯಾಚ್ ಆಗುವ ಬಣ್ಣದ ಶೇಡ್ ಹಚ್ಚಿ. ಡಬಲ್ ಕಲರ್‌ನಲ್ಲಿಯೂ ಹಚ್ಚಬಹುದಾಗಿದೆ.. ಇದು ನಿಮ್ಮ ಕಣ್ಣು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಇದರ ಜೊತೆಗೆ ನೀಬು ಪಾರ್ಟಿಗೆ ಹೋಗ್ತಾ ಇದ್ದೀರಾದರೆ ಕಣ್ಣಿನ ಮಲಿನ ರೆಪ್ಪೆಗೆ ಗ್ಲಿಟರ್ ಕೂಡ ಬಳಸಬಹುದು.. ಗ್ಲಿಟರ್ ಬಳಸುವಾಗ ಹೆಚು ಜಾಗೃತರಾಗಿರಬೇಕು.. ಸಣ್ಣ ಪ್ರಮಾಣದಲ್ಲಿ ತೆಳುವಾಗಿ ಗ್ಲಿಟರ್ ಹಚ್ಚಬಹುದಾಗಿದೆ.. ಕಣ್ಣಿನ ಸೌಂದರ್ಯಕ್ಕೆ ಬೇಕಾದ ಹಲವು ಮೇಕಪ್ ಐಟಂಗಳು ಮಾರುಕಟ್ಟೆಯಲ್ಲಿ ಯಥೇಚ್ಚವಾಗಿ ಲಭ್ಯವಿದೆ.. ನೈಸರ್ಗಿಕ ಉತ್ಪನ್ನಗಳಿಂದ ತಯಾರಿಸಿದ ಐಟಂಗಳ ಬಗ್ಗೆ ಗಮನದಲ್ಲಿ ಇಟ್ಟುಕೊಂಡು ಪರ್ಚೇಸ್ ಮಾಡಿ.
  • ಇನ್ನು ಅನೇಕರು ತಮ್ಮ ಕಣ್ಣಿಗೆ ಸಿಂಪಲ್ ಆಗಿ ಕಪ್ಪು ಕಾಡಿಗೆ ಬಳಸಿದ್ರೆ ಸಾಕು.. ಈ ಕಪ್ಪು ಕಾಡಿಗೆಯನ್ನ ನಾವೇ ಮನೆಯಲ್ಲಿ ತಯಾರಿಸ್ರೆ ಉತ್ತಮ ಅಂತ ಯೋಚನೆ ಮಾಡಿದ್ರೆ.




    ನಿಮಗೂ ಟಿಪ್ಸ್ ಇಲ್ಲಿದೆ..


  • ಬಾದಾಮಿ, ಬತ್ತಿ, ಹರಳೆಣ್ಣೆ, ಮತ್ತು ತುಪ್ಪ ಬಳಸಿ ಕಾಜಲ್ ತಯಾರಿಸಬಹುದು.
    ಮೊದಲು ಒಂದು ದೀಪದ ಕಂಬವನ್ನು ತೆಗೆದುಕೊಂಡು ಇದಕ್ಕೆ ಹರಳೆಣ್ಣೆ ಹಾಕಬೇಕು.
    ಹತ್ತಿಯ ಬತ್ತಿಯ ಸಹಾಯದಿಂದ ದೀಪವನ್ನು ಹೊತ್ತಿಸಿ, ಇದರ ಶಾಖದಲ್ಲಿ ಬಾದಾಮಿಯನ್ನು ಇಕ್ಕಳದ ಸಹಾಯದಿಂದ ಸಂಪೂರ್ಣವಾಗಿ ಸುಡಬೇಕು.
    ಆನಂತರ, ಇದು ಸುಟ್ಟು ಕರಕಲು ಆದ ಬಳಿಕ, ತಣ್ಣಗಾಗಲು ಬಿಡಬೇಕು. ಆನಂತರ, ಇದನ್ನು ಚೆನ್ನಾಗಿ ನುಣ್ಣಗೆ ಪುಡಿ ಮಾಡಬೇಕು.
    ಆನಂತರ, ಇದನ್ನು ಜರಡಿ ಮಾಡಿಕೊಂಡು, ಇದಕ್ಕೆ ಸ್ವಲ್ಪ ತುಪ್ಪ ಬೆರೆಸಿ, ಕಲೆಸಿ, ಆನಂತರ ಒಂದು ಡಬ್ಬಿಯಲ್ಲಿ ತೆಗೆದಿಟ್ಟುಕೊಂಡರೆ, ಎರಡರಿಂದ ಮೂರು ತಿಂಗಳವರೆಗೆ ಇದನ್ನು ಉಪಯೋಗಿಸಬಹುದು.
    ನೈಸರ್ಗಿಕ ಕಾಡಿಗೆಯಲ್ಲಿ ಕರ್ಪೂರ ಮುಖ್ಯ ಅಂಶವಾಗಿದೆ. ಇದು ಕಣ್ಣುಗಳಿಗೆ ತಂಪು ನೀಡುತ್ತದೆ ಮತ್ತು ಕಣ್ಣುಗಳಿಗೆ ಒತ್ತಡದಿಂದ ಮುಕ್ತಿ ನೀಡುತ್ತದೆ. ಅಲ್ಲದೇ ಕಣ್ಣುಗಳ ಆರೋಗ್ಯವು ಉತ್ತೇಜಿಸುತ್ತದೆ.

https://lnk.ink/NXA3z
https://lnk.ink/aazV1
https://lnk.ink/DLgne
https://lnk.ink/WNnIT

LEAVE A REPLY

Please enter your comment!
Please enter your name here