ಪುತ್ತೂರು : ಆರು ವರುಷಗಳಿಂದ ಪುತ್ತೂರಿನ ನೆಲ್ಲಿಕಟ್ಟೆ ಬಳಿಯ ಬರೆಕೆರೆ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ , ಹರಿಪ್ರಸಾದ್ ರೈ ಫೌಂಡೇಶನ್ ಮಣಿಪಾಲ್ ಇದರ ಅಂಗಸಂಸ್ಥೆ ಹೆಚ್ಪಿಆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಆಂಡ್ ಪಾರಾ ಮೆಡಿಕಲ್ ಸಯನ್ಸ್ ಕಾಲೇಜಿನಲ್ಲಿ 2025-26 ನೇ ಸಾಲಿಗೆ ದಾಖಲಾತಿ ಪ್ರಾರಂಭಗೊಂಡಿದ್ದು ,ಆಸಕ್ತ ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ.
ಪ್ರತಿ ಬಾರಿಯೂ 80 ಶೇಕಡಾ ಫಲಿತಾಂಶ ಪಡೆಯುತ್ತಿರುವ ಸಂಸ್ಥೆಯಲ್ಲಿ ಪ್ರತಿವರ್ಷವೂ 400 ರಿಂದ 430 ವಿದ್ಯಾರ್ಥಿಗಳು ಪ್ರವೇಶಾತಿಯನ್ನು ಪಡೆಯುತ್ತಿದ್ದಾರೆ.

ಕಾಲೇಜಿನಲ್ಲಿ ಜಿ.ಎನ್ ಎಂ , ಡಿ ಎಂ ಎಲ್ ಟಿ , ಡಿ ಒ ಒ ಟಿ / ಎ ಟಿ ಕೋರ್ಸುಗಳು ಲಭ್ಯವಿದ್ದು , ಜಿ.ಎನ್.ಎಂ ಕೋರ್ಸ್ ಅವಧಿ ಮೂರು ವರ್ಷಗಳಾಗಿದ್ದು ಪ್ರವೇಶಾತಿ ಪಡೆಯೋ ವಿದ್ಯಾರ್ಥಿಗಳು ಪಿಯು ಶಿಕ್ಷಣವನ್ನು ಮುಗಿಸಿರಬೇಕು. ಬಳಿಕ ಆರು ತಿಂಗಳ ಇಂಟರ್ನ್ಶಿಪ್ ಕೂಡ ಇರುತ್ತದೆ. ಡಿ.ಎಂ.ಎಲ್.ಟಿ ಕೋರ್ಸ್ ಕೂಡ ಮೂರು ವರ್ಷಗಳ ಅವಧಿಯ ಕೋರ್ಸ್ ಆಗಿದ್ದು, ಎಸ್ಎಸ್ಎಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ.
ಪಿಯು ವಿಜ್ಞಾನ ವಿಭಾಗದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ನೇರವಾಗಿ ದ್ವಿತೀಯ ವರ್ಷದ ಡಿ.ಎಂ.ಎಲ್.ಟಿ ತರಗತಿಗೆ ಪ್ರವೇಶವನ್ನು ಪಡೆಯೋ ಅವಕಾಶವು ಇರುತ್ತದೆ.
ಡಿ.ಓ.ಓ.ಟಿ /ಎ.ಟಿ. ಕೋರ್ಸ್ ಗಳು ಕೂಡ ಮೂರು ವರುಷಗಳದಾಗಿದ್ದು, ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಹರು. ಇಲ್ಲೂ ಕೂಡ ಪಿಯು ವಿಜ್ಞಾನ ಶಿಕ್ಷಣ ಪಡೆದವರು ನೇರವಾಗಿ ದ್ವಿತೀಯ ವರುಷಕ್ಕೆ ಪ್ರವೇಶಾತಿಯನ್ನು ಪಡೆದುಕೊಳ್ಳಬಹುದು.
ನುರಿತ ಭೋದಕ ತಂಡ , ಅತ್ಯುತ್ತಮ ಲ್ಯಾಬೋರೇಟರಿ ಸೌಲಭ್ಯ , ಖಾಸಗಿ ಮತ್ತು ಸರಕಾರಿ ಆಸ್ಪತ್ರೆ ಮುಖೇನವೂ ತರಬೇತಿ ನೀಡಲಾಗುತ್ತದೆ.
ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ ಸೌಕರ್ಯವನ್ನೂ ಹಾಸ್ಟೆಲ್ ಮೂಲಕ ಕಲ್ಪಿಸಿ ಕೊಡಲಾಗುತ್ತದೆ.
ಆಸಕ್ತ ವಿದ್ಯಾರ್ಥಿಗಳು ಕಛೇರಿ ದೂರವಾಣಿ 9686946964 ಅಥವಾ 8139922542 ಕರೆ ಮಾಡುವಂತೆ ಕಾಲೇಜು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

8 ಶಾಖೆ ಹೊಂದಿರುವಂತಹ ಹೆಚ್ಪಿಆರ್…
ಹೆಚ್ ಪಿ ಆರ್ ಪ್ರಾರಂಭ ಸ್ಥಳ ಮಣಿಪಾಲ. ಬಳಿಕ ಮಂಗಳೂರು, ಸೊರಬ, ಬೆಂಗಳೂರು, ಪುತ್ತೂರು, ಬೀದರ್, ಕಲಬುರ್ಗಿ, ಬ್ರಹ್ಮಾವರ ಹಾಗೂ ಬಿಜಾಪುರದಲ್ಲಿ ಶಾಖೆಯನ್ನು ಸಂಸ್ಥೆ ಹೊಂದಿದ್ದು , ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ದೇಶ -ವಿದೇಶದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ.