ʻಸೀಮಾತೀತ ಸಸ್ಯ ಜಗತ್ತುʼ ಲೇಖಕಿ ಎನ್.ಎಸ್. ಲೀಲಾ ಅವರಿಂದ ವಸಂತ ಪ್ರಕಾಶನದ ಮೂಲಕ ಸಮಾಜಕ್ಕೆ ತೆರೆದಿಟ್ಟ ಕೃತಿ.ಕೃತಿಯ ಹೆಸರೇ ಸೂಚಿಸುವಂತೆ ಜಗತ್ತಿನ ಅಚ್ಚರಿಯ ಸಸ್ಯಗಳ ಒಂದಷ್ಟು ಬೆಳಕು ಚೆಲ್ಲುವ ಜ್ಞಾನ ಭಂಡಾರದ ಹೊತ್ತಿಗೆ.

ಈ ಸೃಷ್ಟಿಯಲ್ಲಿ ಪ್ರತಿಯೋಂದು ಸಂಗತಿಯೂ ಅಚ್ಚರಿಯಯ ಒಂದು ಭಾಗವೇ. ಅದನ್ನು ಒಪ್ಪಿಕೊಳ್ಳುವುದು, ಸ್ವೀಕರಿಸುವುದು ಮತ್ತು ಅದರ ಬಳಿಗೆ ಅರಿಯುವುದು ಇತರ ಪ್ರಾಣಿಗಳಿಗೆ ಕಂಡ ಅಚ್ಚರಿ ಎಂಬ ಮನುಷ್ಯನ ತಿಳುವಳಿಕಗೆ ಬಿಟ್ಟ ಸಂಗತಿ.
ಪುಸ್ತಕದಲ್ಲಿ ಅಂತರಾಳದಲ್ಲಿ ವೊಲ್ಲೇಮಿ ಪೈನ್: ಸಸ್ಯ ಜಗತ್ತಿನ ಜೀವಂತ ಡೈನೋಸಾರ್, ಅತ್ತಿ-ಅರಳಿ-ಆಲದಿಂದ ಅಂಜೂರದವರೆಗೆ, ದೈತ್ಯ ಪುಷ್ಪ: ಬುಂಗ ಪದ್ಮ, ಚಿತ್ತಾಕರ್ಷಕ ಟ್ಯುಲಿಪ್ಗಳು, ಅಣಬೆಯ ನಾಡಿನಲ್ಲಿ ಏನೆಲ್ಲ ಬೆಡಗು-ವಿನ್ನಾಣ, ಕಲ್ಲರಳಿ ಹೂವಾಯ್ತು: ಲೈಕನ್ ಹೇಳಿದ ಕತೆ, ಮಾಂಸಾಹಾರಿ ಸಸ್ಯಗಳು, ಕುಂಚಬ್ರಹ್ಮನ ಪರಿಯೆಷ್ಟು?, ತಳಿ-ತಂತ್ರಜ್ಞಾನ: ಕಲ್ಲಂಗಡಿಗಾದ ಕಾಯಕಲ್ಪ, ತನು-ಮನ ತಣಿಸುವ ಜಂಬೀರ ಫಲಗಳು ಸೇರಿದಂತೆ 24 ಶೀರ್ಷಿಕೆಗಳ ಲೇಖನಗಳಿದ್ದು, ಒಂದಕ್ಕಿಂತ ಒಂದು ವಿಷ್ಮಯತೆಯ ಸಾರುವ ಪದಪುಂಜದೊಂದಿಗೆ ಮಾಹಿತಿಯ ರವಾನಿಸುವ ಅಕ್ಷರ ಗ್ರಂಥ.
ಅನೇಕ ವೇಳೆ ನಮಗೆ ಒಂದು ವಸ್ತುವಿನ ಕುರಿತು ಹೇಳುವಾಗ ಅದರ ಗುಣಗಳು ಏನಿವೆಯೋ ಅಷ್ಟನ್ನು ಮಾತ್ರ ಹೇಳುವುದು ಹೆಚ್ಚಿನ ಪುಸ್ತಕಗಳಲ್ಲಿ ಕಂಡು ಬರುವ ಸಂಗತಿ. ಆದರೆ ಈ ಕೈಗೆಟಕುವ ದರದ ಪುಸ್ತಕದಲ್ಲಿ ಅಕ್ಷರಗಳನ್ನು ಓದಿಸುಕೊಂಡು ಹೋಗುವ ಸಾಮರ್ಥ್ಯವನ್ನು ಲೇಖಕಿ ಲೀಲಾ ಅವರು ಕಟ್ಟಿಕೊಟ್ಟಿದ್ದಾರೆ.ಓದುತ್ತಾ ಹೋದಂತೆಲ್ಲ ಅಚ್ಚರಿಯ ಮೈಪುಳಕ ಖಂಡಿತ. ಪರಿಸರದ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ.ನಮ್ಮದೇ ಅಕ್ಕ ಪಕ್ಕದಲ್ಲಿರುವ ಸಸ್ಯ ಜಗತ್ತಿನ ವಿಶೇಷ ಅದು ಹೂ, ಮರ, ಹಣ್ಣುಗಳ ಹೀಗೆ ಆಯ್ದ ಕುತೂಹಲಭರಿತವಾದ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ ಲೇಖಕಿ.
ಪರಿಸರ ಪ್ರೀಯನಿಗೆ ಇದು ಸಂಶೋಧನೆಯ ಪುಸ್ತಕವಾಗಬಹುದು, ಅಕ್ಷರ ಪ್ರೀಯನಿಗೆ ಜ್ಞಾನದ ಪುಸ್ತಕವಾಗಬಹುದು, ಓದಿ ನೋಡುವ ಎಂದು ಅಂದುಕೊಂಡು ಓದಿದವ ಭವಿಷ್ಯದಲ್ಲಿ ಸಂಶೋಧಕನೂ ಆಗಬಹುದು, ಜ್ಞಾನದ ಭಂಡಾರ ಹೊತ್ತ ಮಾನವನೂ ಆಗಬಹುದು. ಹಾಗಾದರೆ ಸಣ್ಣ ಪುಸ್ತಕವನ್ನು ಸಣ್ಣ ಮೊತ್ತ ಕೊಟ್ಟೇ ಇಂದೇ ಖರೀದಿಸಿ ಬಿಡಿ.
ಖರೀದಿಸಲು ಪುಸ್ತಕ ಮನೆ( ಕರೆ ಮಾಡಿ ತಿಳಿಸಿದರೆ ನೀವಿರುವ ಜಾಗಕ್ಕೆ ತಲುಪಿಸುವ ಪುಸ್ತಕ ಮಳಿಗೆ) +91 96064 74289

ಎನ್.ಎಸ್. ಲೀಲಾ
(10 December 1944)
ಎನ್.ಎಸ್. ಲೀಲಾ ಅವರು ಎಂ.ಎಸ್ಸಿ., ಪಿಎಚ್.ಡಿ ಪದವೀಧರರು. ಎಂ.ಇ.ಎಸ್. ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ. ತುಮಕೂರು ಜಿಲ್ಲೆಯ( ಜನನ 10-12-1944 ) ಮಧುಗಿರಿಯವರು. ತಂದೆ -ಎನ್.ಎಸ್. ಕೌಶಿಕ್, ತಾಯಿ- ಅಹಲ್ಯಾಬಾಯಿ ಕೃತಿಗಳು: ಇನ್ಸುಲಿನ್ನ ಆತ್ಮಕತೆ, ಜೀವ ಜಗತ್ತಿನ ಕೌತುಕಗಳ ಮಾಲೆ, ಚಲನೆ, ಲಾಲನೆ-ಪಾಲನೆ, ಪ್ರೀತಿ-ಪ್ರಣಯ, ಹುಟ್ಟು-ಸಾವು, ನಿದ್ದೆ-ವಿಶ್ರಾಂತಿ, ಜೈವಿಕ ತಂತ್ರಜ್ಞಾನ, ನೀರು, ಪ್ರಕೃತಿ-ವಿಕೃತಿ, ಜೆ.ಬಿ.ಎಸ್. ಹಾಲೇನ್, ಊತಕ ಕೃಷಿ, ನಮ್ಮೊಳಗಿನ ಖ್ಯಾತನಾಮರು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸದೋದಿತ ಪ್ರಶಸ್ತಿ, ವರ್ಷದ ಅಂತಾರಾಷ್ಟ್ರೀಯ ಮಹಿಳೆ-2001, ಬಿ.ಎ.ಆರ್.ಸಿ. ಪ್ರಶಸ್ತಿ, ಅತ್ಯುತ್ಯಮ ವಿಜ್ಞಾನ ಶಿಕ್ಷಕ ಪ್ರಶಸ್ತಿಗಳು ಲಭಿಸಿದೆ. …
ಬರಹ: ಅಕ್ಷಯ್ ಕುಮಾರ್ ಎ