ಪುತ್ತೂರು: ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲದ ಪದಗ್ರಹಣ ಸಮಾರಂಭ ಜೂ.30ರಂದು ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯನಿ ಭಗಿನಿ ಲೋರ ಪಾಯ್ಸ್, ಶಾಲಾ ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷ ವಿವೇಕ ಆಳ್ವ, ಹಿರಿಯ ಶಿಕ್ಷಕಿ ಜಾಸ್ಮಿನ್ ಗೋವಿಯಸ್, ಶಾಲಾ ನಾಯಕ ಅಬ್ದುಲ್ ಮನಫ್, ಶಾಲಾ ಉಪನಾಯಕಿ ಲಿನ್ ಲೋಬೊ ಹಾಗೂ ಮಂತ್ರಿಮಂಡಲದ ಎಲ್ಲಾ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಮಂತ್ರಿಮಂಡಲದ ಎಲ್ಲಾ ಸದಸ್ಯರ ಪರಿಚಯದೊಂದಿಗೆ, ಶಾಲಾ ಮುಖ್ಯೋಪಾಧ್ಯಾಯನಿ ಭಗಿನಿ ಲೋರ ಪಾಯ್ಸ್ ಪ್ರಮಾಣವಚನವನ್ನು ವಾಚಿಸಿ ಮಂತ್ರಿಮಂಡಲದ ಎಲ್ಲಾ ಸದಸ್ಯರಿಗೂ ಶುಭ ಹಾರೈಸಿ, ಕರ್ತವ್ಯ ಪಾಲನೆಯ ಮಹತ್ವವನ್ನು ತಿಳಿಸಿದರು.
ರಕ್ಷಕ -ಶಿಕ್ಷಕ ಸಂಘದ ಉಪಾಧ್ಯಕ್ಷ ವಿವೇಕ ಆಳ್ವ ಭಾರತ ದೇಶದ ಸಂವಿಧಾನ ವ್ಯವಸ್ಥೆಯ ಬಗ್ಗೆ ಸರಳ ಉದಾಹರಣೆಯೊಂದಿಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.
ಶಾಲಾ ವಿದ್ಯಾರ್ಥಿ ವೃಂದ ಹಾಗೂ ಶಿಕ್ಷಕ ವೃಂದದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ಶಿಕ್ಷಕಿ ಮರಿಯ ಲೂಸ ಸ್ವಾಗತಿಸಿ,ಕಾರ್ಯಕ್ರಮ ನಿರೂಪಣೆಗೈದು, ವಂದಿಸಿದರು.