ತಿಂಗಳಾಡಿ: ಮುಅಲ್ಲಿಂ ಡೇ ಪ್ರಯುಕ್ತ ಉಸ್ತಾದರಿಗೆ ಗೌರವಾರ್ಪಣೆ

0

ಪುತ್ತೂರು: ಸಮಸ್ತ ಕೇರಳ ಇಸ್ಲಾಂ ವಿದ್ಯಾಭ್ಯಾಸ ಬೋರ್ಡ್ ನಿರ್ದೇಶನದ ಮೇರೆಗೆ ಆಚರಿಸುತ್ತಿರುವ ಮುಅಲ್ಲಿಂ ಡೇ ಆಚರಣೆ ಕಾರ್ಯಕ್ರಮ ತಿಂಗಳಾಡಿ ಶಂಸುಲ್ ಎಜುಕೇಷನ್ ಸೆಂಟರ್ ಸಂಸ್ಥೆಯಲ್ಲಿ ನಡೆಯಿತು. ಸಂಸ್ಥೆಯ ಉಸ್ತಾದರುಗಳನ್ನು ಶಾಲುಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ಸಿದ್ದೀಕ್ ಸುಲ್ತಾನ್ ಅದ್ಯಕ್ಷತೆ ವಹಿಸಿದ್ದರು. ಉಸ್ತಾದರಾದ ಅಬ್ದುಲ್ ಸತ್ತಾರ್ ಕೌಸರಿ , ಉಮ್ಮರ್ ಅಝ್ಹರಿ ಶುಭ ಹಾರೈಸಿ ಮಾತನಾಡಿದರು. ಗೌರವಾದ್ಯಕ್ಷರಾದ ಮಹಮ್ಮದ್ ಹಾಜಿ ಸಂತೋಷ್, ಉಪಾದ್ಯಕ್ಷರಾದ ಮಹಮ್ಮದ್ ಕುಂಞಿ ಪಟ್ಟೆ , ಕಾರ್ಯದರ್ಶಿ ಇಬ್ರಾಹಿಂ ಹಾಜಿ ದರ್ಬೆ, ಅಬ್ದುಲ್ಲ ಪಟ್ಟೆ, ನಿರ್ದೇಶಕರಾದ ಅಬ್ದುಲ್ ರಝಾಕ್ ದರ್ಬೆ, ಲತೀಫ್ ಆದ್ರೋಡಿ, ಲತೀಫ್ ಅಂಙನ್ತಡ್ಕ, ಪೋಷಕರಾದ ಕಾಸಿಂ ತಿಂಗಳಾಡಿ, ಅಬ್ದುಲ್ಲ ಕೈಕಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here