ಪುತ್ತೂರು: ವೈವಾಹಿಕ ಜೀವನದ ಸುವರ್ಣಮಹೊತ್ಸವ ಆಚರಿಸಿಕೊಂಡಿರುವ ಹಿರಿಯ ಸಹಕಾರಿ ಧುರಿಣ, ಸಾಮಾಜಿಕ, ರಾಜಕೀಯ ಮುಂದಾಳು ನಾರಾಯಣ ರೈ ಪರ್ಪುಂಜ ಬಾರಿಕೆ- ದೇವಕಿ ಎನ್ ರೈ ದಂಪತಿಯನ್ನು ಪರ್ಪುಂಜ ಸ್ನೇಹ ಯುವಕ ಮಂಡಲ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಸ್ನೇಹ ಯುವಕ ಮಂಡಲದ ಗೌರವಾಧ್ಯಕ್ಷ ಪ್ರೇಮ್ರಾಜ್ ರೈ ಪರ್ಪುಂಜ, ಗೌರವ ಸಲಹೆಗಾರ ರಾಜೇಶ್ ರೈ ಪರ್ಪುಂಜ, ಅಧ್ಯಕ್ಷ ವಿಪಿನ್ ಶೆಟ್ಟಿ, ಮಹಿಳಾ ಮಂಡಲದ ಅಧ್ಯಕ್ಷೆ ಪ್ರಮೀಳಾ ಹಾಗೂ ಸ್ನೇಹ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ಸದಸ್ಯರುಗಳು ಭಾಗವಹಿಸಿದರು.
