ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿ ಇದರ 23ನೇ ವರ್ಷದ ಕಾರ್ಯಕ್ರಮದ ಪದಾಧಿಕಾರಿಗಳ ಆಯ್ಕೆಯು ಪೂರ್ಲಪ್ಪಾಡಿ ಅಂಗನವಾಡಿ ಕೇಂದ್ರದ ವಠಾರದಲ್ಲಿ ನಡೆಯಿತು.
ಸಮಿತಿಯ ನೂತನ ಅಧ್ಯಕ್ಷರಾಗಿ ಸೇಸಪ್ಪ ಗೌಡ ಕೆಳಗಿನಮನೆ ಪೂರ್ಲಪ್ಪಾಡಿ, ಗೌರವಾಧ್ಯಕ್ಷರಾಗಿ ಈಶ್ವರ ಭಟ್ ಪಿ, ಗೌರವ ಸಲಹೆಗಾರರಾಗಿ ರಾಮಣ್ಣ ಗೌಡ ದೇವರಮನೆ, ಉಪಾಧ್ಯಕ್ಷರಾಗಿ ಲೋಕೇಶ್ ಕೆ ಹಾಗೂ ರಾಧಮ್ಮ ಕೆ, ಪ್ರಧಾನ ಕಾರ್ಯದರ್ಶಿ ಜಯಂತ ಪಿ, ಕಾರ್ಯದರ್ಶಿ ವಿಶಾಕ್ ಕೆ, ಕೋಶಾಧಿಕಾರಿ ಯತೀಶ್ ಪಿ, ಕ್ರೀಡಾ ಕಾರ್ಯದರ್ಶಿ ಆಕಾಶ್ ಕೆ ಹಾಗೂ ಇಂದಿರಾ ನೀರ್ಜರಿ, ಜತೆ ಕಾರ್ಯದರ್ಶಿ ಜಯಪ್ರಕಾಶ್ ಕೆ, ಜತೆ ಕ್ರೀಡಾ ಕಾರ್ಯದರ್ಶಿ ಹಿತೇಶ್ ನೀರ್ಜರಿ ಸೇರಿದಂತೆ ಸಮಿತಿಗೆ ಒಂಭತ್ತು ಜನ ಸಲಹಾ ಸದಸ್ಯರನ್ನು ಆಯ್ಕೆಗೊಳಿಸಲಾಯಿತು.