ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಪೆರಾಬೆ, ಕುಂತೂರು ಮತ್ತು ಮಹಿಳಾ ಬಿಲ್ಲವ ಸಂಘ ಇವರ ಆಶ್ರಯದಲ್ಲಿ ಆಟಿಕೂಟ ಜು.20ರಂದು ದೀನ್ ದಯಾಳ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬಾಲಪ್ಪ ಪೂಜಾರಿ ಮಾಯಿಲ್ಗ ದೀಪ ಪ್ರಜ್ವಲಿಸುವುದರೊಂದಿಗೆ ಉದ್ಘಾಟಿಸಿದರು. ಬಳಿಕ ಮಕ್ಕಳಿಗೆ ಸ್ಪರ್ಧೆಯನ್ನು ನಡೆಸಲಾಯಿತು ಹಾಗೂ ಮುರಳಿ ಬ್ರದರ್ಸ್ ಡಾನ್ಸ್ ಗ್ರೂಪ್ ಇವರಿಂದ ನೃತ್ಯ ವೈಭವ ನಡೆಸಲಾಯಿತು. ಸಂಘದ ಅಧ್ಯಕ್ಷರಾದ ಉದಯಕುಮಾರ್ ಎಣ್ಣೆತೋಡಿ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಪುತ್ತೂರು ತಾಲೂಕು ಬಿಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡಂಜಿ ದೀಪ ಪ್ರಜ್ವಲನೆಯೊಂದಿಗೆ ಹಾಗೂ ಅಕ್ಷಯ ಕಾಲೇಜಿನ ಮುಖ್ಯಸ್ಥರಾದ ಜಯಂತ ನಡುಬೈಲ್‌ರವರು ಚೆನ್ನೆಮಣೆ ಆಟ ಆಡುವುದರೊಂದಿಗೆ ಆಟಿಕೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆರತಿ ದಾಸಪ್ಪ ಆಟಿಯ ನುಡಿಕಟ್ಟನ್ನು ವಿವರಿಸಿದರು. ಸಾಧಕರಾದ ಮೋಹನ್ ಪೂಜಾರಿ ಕೊಡ್ಲಾ ಹಾಗೂ ಸರಿತಾ ಜನಾರ್ಧನ್ ರವರಿಗೆ ಸನ್ಮಾನ, ಅಲಂಕಾರು ಸಿಎ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಉದಯ ಸಾಲ್ಯಾನ್ ಮಾಯಿಲ್ಗ,ಅಶೋಕ್ ಕುಮಾರ್ ಕೊಯಿಲ, ವಿಜಯ ಅಂಬ ಇವರನ್ನು ಗೌರವಿಸಲಾಯಿತು. ಜಯಂತ ನಡುಬೈಲು, ಪುತ್ತೂರು ಮಹಿಳಾ ಬಿಲ್ಲವ ಸಂಘದ ಅಧ್ಯಕ್ಷೆ ವಿಮಲಾ ಸುರೇಶ್, ಜೊತೆ ಕಾರ್ಯದರ್ಶಿ ದಯಾನಂದ ಕರ್ಕೇರ ಸಂದರ್ಭೋಚಿತವಾಗಿ ಮಾತನಾಡಿದರು. ಕೋಟಿ ಚೆನ್ನಯ ಮಿತ್ರವೃಂದದ ಅಧ್ಯಕ್ಷರು ರಮೇಶ್ ಕೇಪುಳು,ಮಹಿಳಾ ಬಿಲ್ಲವ ಸಂಘ ಪೆರಾಬೆ ಕುಂತೂರು ಇದರ ಅಧ್ಯಕ್ಷೆ ಉಷಾ ರವಿ ಮಾಯಿಲ್ಗ, ಬಿಲ್ಲವ ಸಂಘ ಪೆರಾಬೆ ಕುಂತೂರು ಇದರ ಗೌರವಾಧ್ಯಕ್ಷರಾದ ಹರ್ಷಿತ್ ಮಾಯಿಲ್ಗ ವೇದಿಕೆಯಲ್ಲಿದ್ದರು.
ಬಿಲ್ಲವ ಸಂಘ ಪೆರಾಬೆ ಇದರ ಅಧ್ಯಕ್ಷರಾದ ಉದಯಕುಮಾರ್ ಎಣ್ಣೆತ್ತೋಡಿ ಅಧ್ಯಕ್ಷೀಯ ಮಾತುಗಳನ್ನು ಆಡಿದರು. ವಿಸ್ಮಿತ ಮಾಯಿಲ್ಗ ಪ್ರಾರ್ಥಿಸಿದರು. ವಿಜಯಕುಮಾರ್ ಕೆದಿಲ ಸ್ವಾಗತದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯ್ ಸಾಲ್ಯಾನ್ ವಂದಿಸಿದರು. ಅನಿಲ್ ಕುಮಾರ್ ಊರ್‌ಸಾಗು, ಧನ್ಯಶ್ರೀ ಮಾಯಿಲ್ಗ ಕಾರ್ಯಕ್ರಮ ನಿರೂಪಿಸಿದರು.