ಪುತ್ತೂರು: ಕುರಿಯ ಗ್ರಾಮದ ಹೊಸಮಾರು ನಿವಾಸಿ, ಊರ ಗೌಡ್ರು ಲಿಂಗಪ್ಪ ಗೌಡ(75ವ) ಅವರು ಜು.23ರಂದು ರಾತ್ರಿ ನಿಧನರಾದರು.
ಊರ ಗೌಡರಾಗಿ ಸೇವೆ ನೀಡುತ್ತಿದ್ದ ಅವರು ಪ್ರಗತಿಪರ ಕೃಷಿಕರಾಗಿ ಊರಿನಲ್ಲಿ ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಪದ್ಮಾವತಿ, ಪುತ್ರರಾದ ಜಯಪ್ರಕಾಶ್ ಗೌಡ, ಚಿದಾನಂದ ಗೌಡ, ಗಣೇಶ್ ಗೌಡ, ಮನೋಜ್ ಗೌಡ, ಪುತ್ರಿಯರಾದ ಮಾಲತಿ ಸೀತಾರಾಮ, ಇಂದಿರಾ ರಾಜೇಶ್, ತಾರಾ ಹಾಗು ಅಳಿಯಂದಿರಾದ ಸೀತಾರಾಮ, ರಾಜೇಶ್ ಅವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಜು.24ರಂದು ನಡೆಯಿತು. ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ, ಕುರಿಯ ಗ್ರಾಮದ ಪ್ರಮುಖರಾದ ಶಿವರಾಮ ಆಳ್ವ, ಮಧು ನರಿಯೂರು, ಬೂಡಿಯಾರ್ ರಾಧಾಕೃಷ್ಣ ರೈ, ಬೂಡಿಯಾರು ಪುರುಷೋತ್ತಮ ರೈ, ಗಣೇಶ್ ರೈ ಬೂಡಿಯಾರು, ರವೀಂದ್ರನಾಥ ರೈ ಬಳ್ಳಮಜಲು ಸಹಿತ ಹಲವಾರು ಮಂದಿ ಆಗಮಿಸಿ ಸಂತಾಪ ಸೂಚಿಸಿದರು.
ರಿಕ್ಷಾ ಚಾಲಕರಾಗಿದ್ದ ಲಿಂಗಪ್ಪ ಗೌಡ:
ಲಿಂಗಪ್ಪ ಗೌಡ ಅವರು ಬಹಳ ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸ್ವಂತ ರಿಕ್ಷಾ ಖರೀದಿ ಮಾಡಿ ರಿಕ್ಷಾ ಚಾಲಕರಾಗಿದ್ದರು. ಸುಮಾರು 30 ವರ್ಷ ಅಲ್ಲಿ ಚಾಲಕರಾಗಿದ್ದ ಅವರು ಬಳಿಕ ಊರಿಗೆ ಬಂದು ಸ್ವಲ್ಪ ಸಮಯ ರಿಕ್ಷಾ ಚಾಲಕರಾಗಿ ಬಳಿಕ ಪೂರ್ಣಾವಧಿ ಕೃಷಿಕರಾಗಿದ್ದರು.