ಪುತ್ತೂರು : ಕೇಂದ್ರೀಯ ಶಿಕ್ಷಣ ಮಂಡಳಿಯು ಆಯೋಜಿಸಿರುವ ಸ್ಕಿಲ್ ಎಕ್ಸ್ಪೋ ಮತ್ತು ಗೈಡೆನ್ಸ್ ಪೆಸ್ಟಿವಲ್ ಗೆ ವಿವೇಕಾನಂದ ಸೆಂಟ್ರಲ್ ಸ್ಕೂಲಿನ ವಿದ್ಯಾರ್ಥಿನಿಯರು ಆಯ್ಕೆಯಾಗಿರುತ್ತಾರೆ.
10ನೇ ತರಗತಿಯ ವಿದ್ಯಾರ್ಥಿನಿ ಧನ್ಯಶ್ರೀ ಅವರ “ಎ ನೋವೆಲ್ ಗಮ್ ಫ್ರಮ್ ಎಪಿಸ್ ಟ್ರೈಗೋನ” ಎಂಬ ವಿಜ್ಞಾನ ಮಾದರಿ ಮತ್ತು 8ನೇ ತರಗತಿಯ ವಿದ್ಯಾರ್ಥಿನಿ ಸುದೀಕ್ಷಾ ಎಸ್.ಭಟ್ ಅವರ “ಧೂಪನ ರಿವಿಸಿಟೆಡ್ – ಆನ್ ಏರ್ ಬೋರ್ನ್ ಮೈಕ್ರೋಬ್ ರಿಪೆಲ್ಲೆಂಟ್ ಹರ್ಬಲ್ ಫೋರ್ಮ್ಯುಲೇಷನ್” ಎಂಬ ವಿಜ್ಞಾನ ಮಾದರಿ, ‘ಸ್ಕಿಲ್ ಎಕ್ಸ್ಪೋ’ ಸ್ಪರ್ಧೆಗೆ ಆಯ್ಕೆಯಾಗಿವೆ.
ಅಲ್ಲದೇ, ಶಾಲೆಯ 16 ವಿದ್ಯಾರ್ಥಿಗಳು ಗೈಡೆನ್ಸ್ ಪೆಸ್ಟಿವಲ್ ನಲ್ಲಿ ಭಾಗವಹಿಸುತ್ತಾರೆ. ಈ ಸ್ಪರ್ಧೆಯು ಶಕ್ತಿ ರೆಸಿಡೆನ್ಸಿಯಲ್ ಸ್ಕೂಲ್ ಮಂಗಳೂರಿನಲ್ಲಿ ಜುಲೈ 30ರಂದು ನಡೆಯಲಿದೆ.
ಇದರ ಮೇಲ್ವಿಚಾರಣೆಯನ್ನು ಶಾಲಾ ಉಪ ಪ್ರಾಂಶುಪಾಲರಾದ ಶ್ರೀದೇವಿ ಹೆಗ್ಡೆ ಇವರು ಮಾಡಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.