ಪುತ್ತೂರು: ಲೋಕ ಪ್ರವಾದಿ ಮುಹಮ್ಮದ್(ಸ.ಅ) ರವರ 1500ನೇ ಜನ್ಮ ದಿನಾಚರಣೆಯ ಪ್ರಯುಕ್ತ ಕೂರತ್‌ನಲ್ಲಿ 111 ಮಂದಿ ಸದಸ್ಯರನ್ನೊಳಗೊಂಡ ಮೀಲಾದ್ ಸಮಿತಿಯನ್ನು ಕೂರತ್ ಮಸೀದಿಯಲ್ಲಿ ರಚಿಸಲಾಯಿತು. ಸಯ್ಯಿದ್ ಮಶ್‌ಹೂದ್ ತಂಙಳ್ ನೇತೃತ್ವ ನೀಡಿದರು.
ಮೀಲಾದ್ ಸ್ವಾಗತ ಸಮಿತಿ ನಿರ್ದೇಶಕ ಮಂಡಳಿ ಮುಖ್ಯಸ್ಥರಾಗಿ ಸಯ್ಯಿದ್ ಮಶಹೂದ್ ತಂಙಳ್, ಅಬ್ದುಲ್ ಖಾದಿರ್ ಹನೀಫಿ ಅಲ್ ಫಾಳಿಲಿ, ಅಬೂಬಕರ್ ಕೂರತ್ ಆಯ್ಕೆಯಾದರು. ಚೇರ್‌ಮೆನ್ ಆಗಿ ಜಮಾಲುದ್ದೀನ್ ಅಮಾನಿ, ಜನರಲ್ ಕನ್ವೀನರ್ ಆಗಿ ಮಿಸ್ಬಾಹ್, ಕೋಶಾಧಿಕಾರಿಯಾಗಿ ನೌಶಾದ್ ಆಯ್ಕೆಯಾದರು.
ವೈಸ್ ಚೇರ್‌ಮೆನ್ ಆಗಿ ರಫೀಕ್ ಅನ್ಯಾಡಿ, ಅಶ್ರಫ್ ಡ್ರೈವರ್, ಜೊತೆ ಕನ್ವೀನರ್ ಆಗಿ ಅಬ್ದುನ್ನಾಸಿರ್ ಪಾಳಿಲಿ, ಶಾಫಿ ದುಬೈ ಆಯ್ಕೆಯಾದರು. ಎಕ್ಸಿಕೂಟಿವ್ ಮೆಂಬರ್ಸ್‌ಗಳಾಗಿ ಸಿದ್ದೀಕ್ ಅಸ್‌ಅದಿ, ಮಿದ್ಲಾಜ್ ಜೌಹರಿ, ಯೂಸುಫ್ ಬಾಯಂಬಾಡಿ, ಜಬ್ಬಾರ್, ಅಲ್ತಾಫ್, ನಝೀರ್, ಹನೀಫ್ ಪೈಂಟ್, ಅಶ್ರಫ್ ಬಿರುಮಜಲ್, ರಝಾಕ್, ಇಬ್ರಾಹಿಂ ಖಲೀಲ್, ಹಾರಿಸ್, ಕಮರು ಅನ್ಯಾಡಿ, ಶಾಫಿ ಸೌದಿ, ಇಬ್ರಾಹಿಂ ಬಿರುಮಜಲ್ ಆಯ್ಕೆಯಾದರು. ಜಮಾಲುದ್ದೀನ್ ಅಮಾನಿ ಸ್ವಾಗತಿಸಿದರು.