ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳ ಬಲವರ್ಧನೆಗೆ ತರಬೇತಿ ಕಾರ್ಯಾಗಾರ

0

ಜೀವ ವೈವಿಧ್ಯ ಕಾಯಿದೆ ಅತ್ಯಂತ ಪ್ರಭಾವ ಶಾಲಿಯಾಗಿದೆ-ಪವಿತ್ರ

ಪುತ್ತೂರು: ನಮ್ಮ ಸುತ್ತಮುತ್ತಲ ಪರಿಸರದಲ್ಲಿರುವ ಜೀವ ವೈವಿಧ್ಯಗಳನ್ನು ರಕ್ಷಣೆ ಮಾಡಿ ಸುಸ್ಥಿರ ಬಳಕೆಗಾಗಿ ಜಾರಿಯಾಗಿರುವ ಜೀವ ವೈವಿಧ್ಯ ಕಾಯಿದೆ' ಅತ್ಯಂತ ಪ್ರಭಾವ ಶಾಲಿಯಾಗಿದೆ. ಇದು ಇತರ ಕಾಯಿದೆಗಳಿಗಿಂತ ಭಿನ್ನವಾಗಿದೆ.ಕಾನೂನಾತ್ಮಕವಾಗಿರುವ ಜೀವ ವೈವಿದ್ಯ ಕಾಯಿದೆಯನ್ನು ಸುಲಭವಾಗಿ ಬದಲಾಯಿಸುವುದು, ತಡೆಗಟ್ಟುವುದು ಸಾಧ್ಯವಿಲ್ಲ. ಸ್ಥಳೀಯವಾಗಿರುವ ಈ ಸಮಿತಿ ಸದಸ್ಯರಿಗೆ ವಿಶೇಷ ಅಧಿಕಾರ ನೀಡಿದೆ ಎಂದು ಬೆಂಗಳೂರು ಜೀವ ವೈವಿದ್ಯ ಮಂಡಳಿ ಉಪನಿರ್ದೇಶಕಿ ಪವಿತ್ರ ಹೇಳಿದರು.

ಕರ್ನಾಟಕ ಜೀವ ವೈವಿದ್ಯ ಮಂಡಳಿ ಮತ್ತು ತಾಲೂಕು ಪಂಚಾಯತ್‌ನ ಸಹಯೋಗದಲ್ಲಿ ಜು.30ರಂದು ತಾ.ಪಂ ಸಭಾಂಗಣದಲ್ಲಿ ನಡೆದ ಜೀವ ವೈವಿದ್ಯ ನಿರ್ವಹಣಾ ಸಮಿತಿಗಳ ಬಲವರ್ದನೆ ಕುರಿತ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯರಿಂದಾಗುವ ಪ್ರಕೃತಿ ವಿನಾಶವನ್ನು ತಡೆಗಟ್ಟುವ ನಿಟ್ಟಿನಲ್ಲಿ 2002ರಲ್ಲಿ ಕಾನೂನಾತ್ಮಕವಾಗಿಜೀವ ವೈವಿದ್ಯಾ ಕಾಯಿದೆ’ ಜಾರಿಯಾಗಿದೆ. ಈ ಕಾಯಿದೆ ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಜೀವ ವೈವಿದ್ಯ ಪ್ರಾಧೀಕಾರ, ರಾಜ್ಯದಲ್ಲಿ ಜೀವ ವೈವಿದ್ಯ ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಜೀವ ವೈವಿದ್ಯ ನಿರ್ವಹಣಾ ಮಂಡಳಿ ಎಂದು ಮೂರು ಹಂತದಲ್ಲಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಸುತ್ತ ಮುತ್ತಲ ಜೀವ ವೈವಿದ್ಯಗಳನ್ನು ರಕ್ಷಿಸಿ ಅದನ್ನು ಮುಂದಿನ ಪೀಳಿಗೆಗೆ ಅಭಿವೃದ್ಧಿ ಪಡಿಸುವುದೇ ಈ ಕಾಯಿದೆ ಉದ್ದೇಶ. ಸ್ಥಳೀಯವಾಗಿ ಸಂಪನ್ಮೂಲಗಳನ್ನು ಬಳಕೆ ಮಾಡಿದರೆ ಅದಕ್ಕೆ ಶುಲ್ಕ ವಿಧಿಸುವ ಅಧಿಕಾರಿ ಸ್ಥಳೀಯವಾಗಿರುವ ಜೀವ ವೈವಿದ್ಯ ಮಂಡಳಿಗಿದೆ. ನಾಟಿ ವೈದ್ಯರು ಜೀವನೋಪಾಯಕ್ಕೆ ಮಾತ್ರ ಸಂಪನ್ಮೂಲಗಳನ್ನು ಬಳಸಬಹುದು. ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಸ್ಥಳೀಯ ಸಮಿತಿಯವರು ಪರಿಸರದಲ್ಲಿರುವ ಪಾರಂಪರಿಕ ತಾಣಗಳು, ಸೂಕ್ಷ್ಮಪ್ರದೇಶ, ಅಲಿವಿನಂಚಿನಲ್ಲಿರು ಗಿಡ, ಪ್ರಾಣಿಗಳು ಮೊದಲಾದ ಜೀವ ವೈವಿದ್ಯಗಳನ್ನು ಗುರುತಿಸಿಕೊಂಡು ಅಲ್ಲಿಗೆ ಪಾರಂಪರಿಕ ತಾಣ ಎಂದು ನಾಮ ಫಲಕ ಅಳಡವಿಸಿದರೆ ಅಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸುವಂತಿಲ್ಲ ಎಂದು ಕಾಯಿದೆಯಲ್ಲಿದೆ ಎಂದರು.


ನವೀನ್ ಭಂಡಾರಿ ಮಾತನಾಡಿ, ಗ್ರಾಮದಲ್ಲಿರುವ ಜೀವ ವೈವಿದ್ಯಗಳನ್ನು ಅಭಿವೃದ್ಧಿ ಪಡಿಸಲು ಕರ್ನಾಟಕ ಜೀವ ವೈವಿದ್ಯ ಮಂಡಳಿಯಿಂದ ಉತ್ತಮ ಸ್ಪಂಧನೆಯಿದೆ. ಬೆಟ್ಟಂಪಾಡಿಯ ಬೆಂದ್ರ್‌ತೀರ್ಥವನ್ನು ಅಭಿವೃದ್ಧಿ ಪಡಿಸಿ ಅದನ್ನು ಪಾರಂಪರಿಕ ತಾಣವಾಗಿ ಅಭಿವೃದ್ಧಿ, ದಾರ್ಮಿಕ ಹಿನ್ನೆಲೆಯೊಂದಿಗೆ ಸುಂದರ ಪ್ರದೇಶವಾಗಿ ಪ್ರವಾಸಿ ತಾಣದಂತಿರುವ ಪಾಣಾಜೆ ಜಾಂಬ್ರೀ ಪ್ರದೇಶ ಹಾಗೂ ನೆಟ್ಟಣಿಗೆ ಮುಡ್ನೂರಿನ ಹರ್ಬಲ್ ಗಾರ್ಡನ್‌ಗಳ ಅಭಿವೃದ್ಧಿಗೆ ಗ್ರಾಮದ ಜೀವ ವೈವಿದ್ಯ ಸಮಿತಿ ಮೂಲಕ ಡಿಪಿಆರ್ ಮಾಡಿ ಕಳುಹಿಸಿದರೆ ಅಭಿಪಡಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯಗಾರ ಆವಶ್ಯಕವಾಗಿದ್ದು ಪ್ರತಿಮೂರು ತಿಂಗಳಿಗೊಮ್ಮೆ ನಡೆಯುವ ನಿರ್ವಹಣಾ ಸಮಿತಿ ಕಾರ್ಯಾಗಾರದಲ್ಲಿಎಲ್ಲರೂ ಭಾಗವಹಸಿ ಅನುಷ್ಠಾನಕ್ಕೆ ಸಹಕರಿಸುವಂತೆ ತಿಳಿಸಿದರು.


ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡು ಮಾತನಾಡಿ, ನೀರು ಅಮೂಲ್ಯವಾದು. ಅದನ್ನು ಪೋಲು ಮಾಡಬಾದರು. ನೀರು ಸಕಲ ಜೀವರಾಶಿಗಳ ಮುಖ್ಯ. ಮಳೆ ಕೊಯ್ಲಿನ ನೀರನ್ನು ಕೃಷಿಗೆ ನಾನು ಬಳಸುತ್ತಿದ್ದೇನೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರಕ್ಕೆ ಹಾನಿಯುಂಟಾಗಬಾರದು. ನೈಸರ್ಗಿಕವಾಗಿ ದೊರೆಯುವ ಸಂಪನ್ಮೂಲಗಳನ್ನು ಬಳಸಿಕೊಂಡು ಅಭಿವೃದ್ಧಿ ಮಾಡಬೇಕು ಎಂದು ಅವರು ಹೇಳಿದರು.
ಕರ್ನಾಟಕ ಜೀವ ವೈವಿದ್ಯ ಮಂಡಳಿಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್ ಪ್ರಸನ್ನ ಪ್ರಾಜೆಕ್ಟರ್ ಮೂಲಕ ಕಾಯಿದೆಯ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.


ಎನ್‌ಆರ್‌ಎಲ್‌ಎಂನ ಭರತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪಾಣಾಜೆ ಗ್ರಾ.ಪಂ ಪಿಡಿಓ ಚಂದ್ರಮತಿ, ತಾ.ಪಂ ಸಹಾಯಕ ನಿರ್ದೇಶಕ ನಾಗೇಶ್ ಎಂ., ತಾ.ಪಂ ಸಹಾಯಕ ಲೆಕ್ಕಾಧಿಕಾರಿ ರವಿಚಂದ್ರ, ಕಚೇರಿ ವ್ಯವಸ್ಥಾಪಕ ಜಯಪ್ರಕಾಶ್ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. 22 ಗ್ರಾ.ಪಂಗಳ ಅಧ್ಯಕ್ಷರು, ಸದಸ್ಯರು, ಪಿಡಿಓಗಳು, ವಿವಿಧ ಇಲಾಖೆಗಳು ಅಧಿಕಾರಿ ಸಿಬಂದಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here