ಅಧ್ಯಕ್ಷ ಕರುಣಾಕರ ಪಾಂಗಳಾಯಿ, ಕಾರ್ಯದರ್ಶಿ ರಾಮನಾಯ್ಕ ಗೆಣಸಿನಕುಮೇರು
ಪುತ್ತೂರು:ಮರಾಟಿ ಸಮಾಜ ಸೇವಾ ಸಂಘ ಪುತ್ತೂರು ಇದರ ನೂತನ ಅಧ್ಯಕ್ಷರಾಗಿ ಬಿಎಸ್‌ಎನ್‌ಎಲ್‌ನ ನಿವೃತ್ತ ಉದ್ಯೋಗಿ, ಲ್ಯಾಂಪ್ಸ್ ಸಹಕಾರ ಸಂಘ ಹಾಗೂ ಮಹಮ್ಮಾಯಿ ಸೌಹಾರ್ದ ಸಹಕಾರಿಯ ನಿರ್ದೇಶಕರಾಗಿರುವ ಕರುಣಾಕರ ಪಾಂಗಳಾಯಿ, ಕಾರ್ಯದರ್ಶಿಯಾಗಿ ನಿವೃತ್ತ ಯೋಧರು, ನಿವೃತ್ತ ಎಸ್‌ಐ ಆಗಿರುವ ರಾಮ ನಾಯ್ಕ ಗೆಣಸಿನಕುಮೇರು, ಖಜಾಂಚಿಯಾಗಿ ಕೆನರಾ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ಈಶ್ವರ ನಾಯ್ಕ ನೆಹರುನಗರ ಹಾಗೂ ಉಪಾಧ್ಯಕ್ಷರಾಗಿ ಉದ್ಯಮಿ ಸೀತಾರಾಮ ನಾಯ್ಕ ಉಪ್ಪಿನಂಗಡಿ ಆಯ್ಕೆಯಾಗಿದ್ದಾರೆ.
ಸಮಿತಿ ಸಂಘಟನ ಕಾರ್ಯದರ್ಶಿಗಳಾಗಿ ಮಾಯಿಲಪ್ಪ ನಾಯ್ಕ, ಬಾಬು ನಾಯ್ಕ ಪೆರ್ಲಂಪಾಡಿ, ರಾಮಚಂದ್ರ ನಾಯ್ಕ ಮಂಜಲ್ಪಡ್ಪು, ಸುರೇಶ ಈಶ್ವರಮಂಗಲ, ಮಮತಾ ಪೆರ್ಲಂಪಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ದುಗ್ಗಪ್ಪ ನಾಯ್ಕ, ಶೀನಪ್ಪ ನಾಯ್ಕ ಎಸ್., ಮೋಹನ ನಾಯ್ಕ ಎಂ., ಶಿವಪ್ಪ ನಾಯ್ಕ, ಕೆ.ಸುಂದರ ನಾಯ್ಕ, ಮಹಾಲಿಂಗ ನಾಯ್ಕ, ರಾಮಚಂದ್ರ ನಾಯ್ಕ ಕೇಪುಳು, ನಾರಾಯಣ ನಾಯ್ಕ ಸಾಜ, ಮಂಜುನಾಥ ಎನ್.ಎಸ್., ಎಂ.ಕೆ ನಾರಾಯಣ ನಾಯ್ಕ, ಪೂವಪ್ಪ ನಾಯ್ಕ ಕುಂಞಕುಮೇರು, ಅಶೋಕ್ ಬಲ್ನಾಡು, ಸುಬ್ಬಣ್ಣ ನಾಯ್ಕ ಪಡ್ನೂರು, ಸುಬ್ರಾಯ ನಾಯ್ಕ ನೀರುಕುಕ್ಕು, ಪರಮೇಶ್ವರ ನಾಯ್ಕ ಪಾಂಗಳಾಯಿ, ಧರ್ಣಪ್ಪ ನಾಯ್ಕ, ಬಾಬು ನಾಯ್ಕ ತೆಂಕಿಲ, ಬಾಲಕೃಷ್ಣ ನಾಯ್ಕ ಪಡೀಲು, ಪಿ.ಎಂ.ಕೃಷ್ಣ ನಾಯ್ಕ, ಗಿರೀಶ್ ಸೊರಕೆ, ಎಂ.ಕೆ ನಾಯ್ಕ, ವೆಂಕಪ್ಪ ನಾಯ್ಕ ಕೊಳ್ತಿಗೆ, ಪುಷ್ಪರಾಜ್ ನಾಯ್ಕ, ಧನಂಜಯ, ದೇವಪ್ಪ ನಾಯ್ಕ ಬಿ. ಹಾಗೂ ವಾಸು ನಾಯ್ಕರವರು ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿದ್ದ ಶಿವಪ್ಪ ನಾಯ್ಕ ನೆಹರುನಗರ ಅಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.