ಕಾಣಿಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಣಿಲದಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಸವಣೂರು ವಲಯ ನಾಣಿಲ ಘಟ ಸಮಿತಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಇವರ ಸಂಯೋಗದೊಂದಿಗೆ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಹಾಗೂ ಗ್ರಾಮೋತ್ಸವದ ಸಲುವಾಗಿ ಬೃಹತ್ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಸವಣೂರು ವಲಯ ನಾಣಿಲ ಘಟಕ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ರೈ ಕಾಸ್ಪಾಡಿಗುತ್ತು, ನಾಣಿಲ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಸಂತ ದಲಾರಿ, ಸದಸ್ಯರಾದ ಪುರಂದರ ಅಂಬುಲ, ನಾಣಿಲ ಘಟ ಸಮಿತಿಯ ಸೇವಾ ದೀಕ್ಷಿತೆ ವಿಮಲಾ ಹಾಗೂ ಸ್ವಚ್ಛತೆಯಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸದಸ್ಯರು ಭಾಗವಹಿಸಿದ್ದರು.