ಉಪ್ಪಿನಂಗಡಿ: ಪುತ್ತೂರು ತಾಲೂಕು ಹಿರೆಬಂಡಾಡಿ ಗ್ರಾಮ ಪಂಚಾಯತಿಗೆ ಒಳಪಟ್ಟ ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಅಝೀಝ್ ಬಿ.ಕೆ.ಅವರು ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷೆಯಾಗಿ ಅಸ್ಮಾ, ಪದಾಧಿಕಾರಿಗಳಾಗಿ ವಾಮನ ಬರಮೇಲು, ಪದ್ಮನಾಭ ಶೆಟ್ಟಿ ಬಡಿಲ, ತೇಜಾವತಿ, ಹಂಝ ಪಿ.ಆಕಿರೆ, ವನಿತಾ, ಸುಮಯ್ಯ, ಅಬ್ದುಲ್ ಖಾದರ್ ಅಡೆಕ್ಕಲ್, ಶರೀಫ್ ಯು.ಟಿ, ಮನೋಹರ ನೇಕಾರಪೇಟೆ, ಅಬೂಬಕ್ಕರ್ ಸಿದ್ದೀಕ್, ತಸೀನಾ, ನಸೀಮಾ, ಹಿದಾಯತುಲ್ಲಾ, ಸಿಮ್ರಾನ್, ಶಂಶಾದ್, ನಸೀಮಾ ಆಯ್ಕೆಯಾದರು.
ಹಿರೇಬಂಡಾಡಿ ಗ್ರಾ.ಪಂ.ಸದಸ್ಯೆ ವಾರಿಜಾಕ್ಷಿಯವರ ಅಧ್ಯಕ್ಷತೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಶಾಲೆಯ ಮುಖ್ಯ ಗುರು ಜಯಶ್ರೀ ಎಂ.ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಧ್ಯಕ್ಷರಾಗಿ ೨ನೇ ಸಲ ಆಯ್ಕೆಯಾದ ಅಝೀಝ್ ಬಿ.ಕೆ.ಮಾತನಾಡಿ, ಮೊದಲ ಅವಧಿಯಲ್ಲಿ ಎಸ್ಡಿಎಂಸಿ ಸದಸ್ಯರ ಸಂಪೂರ್ಣ ಸಹಕಾರದಿಂದ ಹೆಚ್ಚಿನ ಅಭಿವೃದ್ಧಿ ಮಾಡಲು ಸಾಧ್ಯವಾಯಿತು. ಮುಂದೆಯೂ ನಮ್ಮ ಶಾಲೆಗಾಗಿ ಸದಸ್ಯರ ಸಹಕಾರವಿರಲಿ ಎಂದರು. ವೇದಿಕೆಯಲ್ಲಿ ಹಿರೇಬಂಡಾಡಿ ಗ್ರಾ.ಪಂ.ಸದಸ್ಯರಾದ ಹೇಮಂತ್ ಮೈತಳಿಕೆ ಉಪಸ್ಥಿತರಿದ್ದರು. ಟಿಜಿಟಿ ಶಿಕ್ಷಕಿ ಸುಮನಾ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಮೋಹನಾಂಗಿ ವಂದಿಸಿದರು. ಇತರ ಶಿಕ್ಷಕರು ಸಹಕರಿಸಿದರು.