ಪುತ್ತೂರು: ಇತ್ತೀಚೆಗೆ ನಿಧನರಾದ ಚಿಕ್ಕಮುಡ್ನೂರು ಗ್ರಾಮದ ನಗರಸಭಾ ವ್ಯಾಪ್ತಿಯ ಕೃಷಿಕ ಬಡಾವು ಶ್ರೀಧರ ಪೂಜಾರಿಯವರ ಉತ್ತರಕ್ರಿಯೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ಆ.8ರಂದು ನಡೆಯಿತು.
ಅಣ್ಣಿ ಪೂಜಾರಿ ಚೀಮುಳ್ಳು ಕಕ್ಕೆಪದವುರವರು ಮೃತರ ಬಗ್ಗೆ ನುಡಿನಮನ ಸಲ್ಲಿಸಿದರು. ನಂತರ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮೃತರ ಪತ್ನಿ ಗುಲಾಬಿ ಬಡಾವು, ಪುತ್ರ ಬಿ.ಯಸ್ ಚಂದ್ರಕುಮಾರ್ ಬಡಾವು, ಪುತ್ರಿಯರಾದ ಕವಿತಾ, ನಮಿತ, ಅಳಿಯ ಧನಂಜಯ, ಮೊಮ್ಮಕ್ಕಳಾದ ಹವನ್ ಸುವರ್ಣ, ಸಾನ್ವಿಕ, ಸಹೋದರರಾದ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಸಂಜೀವ ಪೂಜಾರಿ ಬಡಾವು, ಸಹೋದರಿಯರು, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ನಗರಸಭಾ ಅಧ್ಯಕ್ಷೆ ಲೀಲಾವತಿ, ಆರ್.ಸಿ ನಾರಾಯಣ್ ಹಾಗೂ ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.