ಉಪ್ಪಿನಂಗಡಿ: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಇಲ್ಲಿನ 2025-26ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿಮಂಡಲದ ರಚನೆಯು ವಿದ್ಯುನ್ಮಾನ ಮತಯಂತ್ರ ಚುನಾವಣಾ ಮಾದರಿಯಲ್ಲಿ ಶಾಲಾ ಮುಖ್ಯಗುರು ಹಾಗೂ ಅಧ್ಯಾಪಕ ವೃಂದದವರ ಮಾರ್ಗದರ್ಶನದೊಂದಿಗೆ ನಡೆಯಿತು.
ಶಾಲಾ ನಾಯಕಿಯಾಗಿ ಸಲ್ವಾ ಫಾತಿಮಾ ಎಂಟನೇ ತರಗತಿ, ಉಪನಾಯಕನಾಗಿ ಚಿಂತನ್ ಬಿ. ಶೆಟ್ಟಿ ಏಳನೇ ತರಗತಿ ಚುನಾಯಿತರಾದರು. ಸಭಾಧ್ಯಕ್ಷರಾಗಿ ಮೊಹಮ್ಮದ್ ಹಯಾನ್, ಶಿಕ್ಷಣ ಮಂತ್ರಿಯಾಗಿ ಫಾತಿಮತುಲ್ ಅಫ್ರಾ ಮತ್ತು ಅಬ್ದುಲ್ ಖಾದರ್, ಗೃಹ ಮಂತ್ರಿಯಾಗಿ ಅಫ್ರಿದ್ ಮತ್ತು ಮಹಮ್ಮದ್ ಸಾರಿಕ್, ಆರೋಗ್ಯಮಂತ್ರಿಯಾಗಿ ಆಯಿಷತುಲ್ ಅಫ್ರೀನಾ ಮತ್ತು ಆಯುಷ್ ಪಿ, ನೀರಾವರಿ ಮಂತ್ರಿಯಾಗಿ ಮಹಮ್ಮದ್ ಬಿಲಾಲ್ ಮತ್ತು ಮಹಮ್ಮದ್ ಪವಾಝ್, ಕ್ರೀಡಾಮಂತ್ರಿಯಾಗಿ ಅಫೀಝ್ ಮತ್ತು ಶಿಬ್ಲಾ ಫಾತಿಮಾ, ವಾರ್ತಾ ಮಂತ್ರಿಯಾಗಿ ಅಭಿಷಿಕ್ತ ಮತ್ತು ಮುನೀಫಾ, ಸಾಂಸ್ಕೃತಿಕ ಮಂತ್ರಿಯಾಗಿ ಜಮೀಲತ್ ನೌಶೀನ ಮತ್ತು ಸಪ್ರತ್, ಸ್ವಚ್ಛತಾ ಮಂತ್ರಿಯಾಗಿ ಸಮರ್ಥ್ ಮತ್ತು ಗೌತಮಿ, ಆಹಾರ ಮಂತ್ರಿಯಾಗಿ ಶಹಲ್ ಉಸ್ಮಾನ್ ಮತ್ತು ಪ್ರನೀತ್ ಆಯ್ಕೆಯಾದರು.
