ಉಪ್ಪಿನಂಗಡಿ: ಪತ್ರಕರ್ತರಾಗಿದ್ದ ದಿ. ಬಿ.ಟಿ. ರಂಜನ್ ಶೆಣೈ ಅವರ ಪುತ್ರಿ ಸೌಮ್ಯ ಶೆಣೈ (29) ಬ್ಲಡ್ ಕಾನ್ಸರ್ನಿಂದ ಆ.16ರಂದು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬಿ.ಟಿ. ರಂಜನ್ ಅವರ ನಿಧನದ ಬಳಿಕ ಉಪ್ಪಿನಂಗಡಿ ತೊರೆದಿದ್ದ ಅವರ ಕುಟುಂಬ ಮಣಿಪಾಲದಲ್ಲಿ ವಾಸ್ತವ್ಯ ಹೊಂದಿತ್ತು. ಸ್ನಾತಕೋತ್ತರ ಪದವೀಧರೆಯಾಗಿದ್ದ ಸೌಮ್ಯ ಶೆಣೈ ಅವರು ಅಲ್ಲಿಯೇ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿ, ಮದುವೆಯಾದ ಬಳಿಕ ಪತಿಯ ಮನೆಯಲ್ಲಿ ನೆಲೆಸಿದ್ದರು. ಕಳೆದ ತಿಂಗಳು ಅನಾರೋಗ್ಯಕ್ಕೆ ಅವರು ತುತ್ತಾದಾಗ ವೈದ್ಯಕೀಯ ಪರೀಕ್ಷೆಯಲ್ಲಿ ಅವರು ಬ್ಲಡ್ ಕ್ಯಾನ್ಸರ್ಗೆ ತುತ್ತಾಗಿರುವುದು ಗಮನಕ್ಕೆ ಬಂದಿತ್ತು. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಆ.16ರಂದು ನಿಧನರಾಗಿದ್ದಾರೆ. ಮೃತರು ತಾಯಿ ಹಾಗೂ ಪತಿಯನ್ನು ಅಗಲಿದ್ದಾರೆ.