ವಿವೇಕಾನಂದ ವಿದ್ಯಾವರ್ಧಕ ಸಂಸ್ಥೆಗೆ ರಜನೀಶ್ ಕನೋತ್ರ ಭೇಟಿ

0

ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತ ಹಂತದ ನಿರ್ಣಯದಂತೆ ಆಯ್ದ ವಿದ್ಯಾಭಾರತಿ ಶಾಲೆಗಳನ್ನು ಭೇಟಿ ಮಾಡಿ, ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ಗಮನಿಸಿ, ವರದಿ ನೀಡುವ ಸಲುವಾಗಿ ವಿವೇಕಾನಂದ ವಿದ್ಯಾವರ್ಧಕ ಸಂಸ್ಥೆಗೆ ಜಮ್ಮು ನಿವಾಸಿ, ಮುಂಬೈಯಲ್ಲಿ ವೃತ್ತಿಯಲ್ಲಿರುವ ರಜನೀಶ್ ಕನೋತ್ರ ಭೇಟಿ ನೀಡಿದರು.

ಸಂಸ್ಥೆಯ ಕಾರ್ಯ ಚಟುವಟಿಕೆಗಳು, ವ್ಯವಸ್ಥೆಗಳನ್ನು ಗಮನಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಸಂಸ್ಥೆಗಳಲ್ಲಿ ಡಿಜಿಟಲ್ ತರಗತಿ, ವಿಜ್ಞಾನದ ವಿಷಯಗಳ ಉತ್ತೇಜನ, ಸಂಸ್ಕೃತಿ- ಸಂಸ್ಕಾರಗಳ ಅಳವಡಿಕೆ ಇತ್ಯಾದಿ ವಿಷಯಗಳ ಕುರಿತು ವರದಿ-ಅಧ್ಯಯನ ಈ ಭೇಟಿಯ ಮುಖ್ಯ ಉದ್ದೇಶವಾಗಿತ್ತು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ( ರಿ) ಇದರ ಸಹ ಕಾರ್ಯನಿರ್ವಾಹಣಾಧಿಕಾರಿ ವೆಂಕಟರಮಣರಾವ್ ಮಂಕುಡೆ, ಶೈಕ್ಷಣಿಕ ಪರಿವೀಕ್ಷಣಾಧಿಕಾರಿ ರಘುರಾಜ ಉಬರಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here