ಪುತ್ತೂರು: ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಮತ್ತು ಕೋಡ್ ಕ್ರಾಫ್ಟ್ ಟೆಕ್ನಾಲಜಿ ಸಹಯೋಗದಲ್ಲಿ ಉತ್ತಮ ಬದುಕಿಗೆ ವಿಜ್ಞಾನ ಎಂಬ ವಿಷಯದ ಅಡಿಯಲ್ಲಿ ಕೋಡ್ ಕ್ರಾಫ್ಟ್ ವಿಜ್ಞಾನ ಮೇಳ ನಡೆಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿಜ್ಞಾನ ಮಾದರಿಗಳನ್ನು ಪ್ರದರ್ಶನ ಮಾಡಲಾಯಿತು. ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ ಸ್ವಯಂಸೇವಕರಾದ ಶ್ರೀವತ್ಸ, ಅಕ್ಷತಾ, ಅನನ್ಯ ವಿದ್ಯಾರ್ಥಿಗಳ ಮಾದರಿಗಳ ತೀರ್ಪುಗಾರರಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದರು.
ವಿದ್ಯಾ ಸಂಸ್ಥೆ ಮುಖ್ಯಸ್ಥರಾದ ರಾಜೇಶ್ ನೆಲ್ಲಿತ್ತಡ್ಕ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಸಹಾಯಕವಾಗುತ್ತದೆ ಹಾಗೂ ವಿಜ್ಞಾನದತ್ತ ಅವರ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ಫಲಿತಾಂಶ: ಪ್ರಾಥಮಿಕ ವಿಭಾಗದಲ್ಲಿ ವೈಷ್ಣವಿ ಹಾಗೂ ಸಾನ್ವಿ 7ನೇ ತರಗತಿ ಪ್ರಥಮ, ವೈಗಾ ಹಾಗೂ ಪ್ರಾಪ್ತಿ 7ನೇ ತರಗತಿ ದ್ವಿತೀಯ, ನಿವೇದ್ 6ನೇ ತರಗತಿ ತೃತೀಯ, ಪ್ರೌಢಶಾಲಾ ವಿಭಾಗದಲ್ಲಿ ಸೌರಭ ಪುಂಚಿತಾಯ ಹಾಗೂ ನಿಖಿಲೇಶ್ ಪಿ ಎಂಟನೇ ತರಗತಿ ಪ್ರಥಮ, ಸಿಂಚನ ಬಿ ಎಸ್ ಹಾಗೂ ಪ್ರನ್ವಿ ಪ್ರಸಾದ್ 8ನೇ ತರಗತಿ ದ್ವಿತೀಯ ಹಾಗೂ ಧನ್ವೀರೈ ಪಿ ಹಾಗೂ ರಿಯೋಲಾ ಆಶ್ಲೀಟ ಮಾರ್ಟಿಸ್ ಎಂಟನೇ ತರಗತಿ ತೃತೀಯ ಸ್ಥಾನ ಪಡೆದು ನಗದು ಬಹುಮಾನದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಹಕರಿಸಿದರು.