ಪುತ್ತೂರು: ಸವಣೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ Onity ಕಂಪನಿಯ CSR FUND ನಿಂದ ಶಾಲೆಯ LKG/ UKG ಯಿಂದ 8ನೇ ತರಗತಿಯ ವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆಯನ್ನು ಆ 22 ರಂದು ಮಾಡಲಾಯಿತು.
ಕಂಪನಿಯ ಉದ್ಯೋಗಿ ಶರತ್ ಸಮ್ಮುಖದಲ್ಲಿ ವಿತರಿಸಲಾಯಿತು. ಶರತ್ ಅವರನ್ನು ಎಸ್ ಡಿ ಎಂ ಸಿ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಅಶ್ರಫ್ ಜನತಾ ವಹಿಸಿದ್ದರು.
ರಾಷ್ಟ್ರಿಯ ಬಾಲ ಸ್ವಾಸ್ತ್ಯ ಅರೋಗ್ಯ ತಪಾಸಣೆ ತಂಡದ ವೈದ್ಯಾಧಿಕಾರಿಗಳಾದ ಡಾ .ದೀಕ್ಷಾ ಮತ್ತು ಡಾ.ವಿದ್ಯಾ ಹಾಗೂ ತಾಯಂದಿರ ಸಮಿತಿ ಅಧ್ಯಕ್ಷೆ ತಾಹಿರ ಉಪಸ್ಥಿತರಿದ್ದರು. ಎಸ್ ಡಿ ಎಂ ಸಿ ಸದಸ್ಯರುಗಳಾದ ಉಮ್ಮರ್ , ನವ್ಯಶ್ರೀ, ಶೇಖರ, ಜೈ ನಾ ಬಿ,ಹೇಮಲತಾ, ಕತೀಜ, ಹಿರಿಯ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.ಮುಖ್ಯ ಗುರು ನಿಂಗರಾಜು ಕೆ. ಪಿ. ಸ್ವಾಗತಿಸಿ. ಶಿಕ್ಷಕ ಓಬಳೇಶ್ ಸಂದಭೋಚಿತವಾಗಿ ಮಾತನಾಡಿದರು. ಶಿಕ್ಷಕಿ ಪ್ರಮೀಳಾ ಪ್ರಾರ್ಥನೆಗೈದರು. ಶಿಕ್ಷಕ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶಶಿಕಲಾ ವಂದಿಸಿದರು.