ಪುತ್ತೂರು : ಪಾಣಾಜೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 30ನೇ ವರ್ಷದ ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಆ.26-27ರಂದು ನಡೆಯಲಿದೆ. ಆ.26ರಂದು ಮಂಗಲ ಗೌರಿ ವೃತಪೂಜೆ ನಡೆಯಲಿದೆ.ಆ.27ರಂದು ಮಹಾಗಣಪತಿ ದೇವರಿಗೆ ಬೆಳ್ಳಿ ಕಿರೀಟ ಸಮರ್ಪಣೆಯೊಂದಿಗೆ ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ನಡೆಯಲಿದೆ.ಸಂಜೆ 3.ರಿಂದ ಶ್ರೀ ಗೌರಿ ಗಣೇಶನ ಶೋಭಾಯಾತ್ರೆ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು
ಆ.26ರಂದು ಬೆ. 9-30: ಶ್ರೀ ಗೌರಿ ಪ್ರತಿಷ್ಠೆ, ಬೆಳಿಗ್ಗೆ 9-30ರಿಂದ 12-00ರ ತನಕ ವಿವಿಧ ಭಜನಾ ತಂಡದಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ 12-00ಕ್ಕೆ ಕಥಾ ಪ್ರವಚನ, ಮಧ್ಯಾಹ್ನ 12-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1-00ಕ್ಕೆ ಅನ್ನಸಂತರ್ಪಣೆ, ಮಧ್ಯಾಹ್ನ 1-00ರಿಂದ 3-00 ಗಂಟೆಗೆ ಶಾಲಾ ಮಕ್ಕಳಿಂದ ಹಾಗೂ ಊರವರಿಂದ ಸಾಂಸ್ಕೃತಿಕ ವೈಭವ , ಸಂಜೆ 3-00 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, ಸಂಜೆ 6-00 ಗಂಟೆಗೆ ಶ್ರೀ ಗೌರೀ ಮಾತೆಗೆ ಪ್ರಸನ್ನಾರ್ಥ್ಯ ಸಮರ್ಪಣೆ, ಮಹಾಪೂಜೆ, ಮಂಗಳಾರತಿ ವ್ರತಸಮಾಪ್ತಿ, ಸಂಜೆ 6-30ರಿಂದ ಶ್ರೀ ಸುಬ್ರಹ್ಮಣೇಶ್ವರ ಯಕ್ಷಗಾನ ಕಲಾ ಸಂಘ ಆರ್ಲಪದವು ಇದರ ಆಶ್ರಯದಲ್ಲಿ ಯಕ್ಷಗಾನ ಜೋಡಾಟ ಪ್ರಸಂಗ ʼಮಹಿಷಮರ್ದಿನಿʼ ನಿರ್ದೇಶನ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ, ರಾತ್ರಿ 8-30 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಆ.27ರಂದು, ಬೆಳಿಗ್ಗೆ 8-00ಕ್ಕೆ ಶ್ರೀ ಗಣೇಶ ಪ್ರತಿಷ್ಠೆ, 8-00ರಿಂದ 9-00ರ ತನಕ ಭಜನಾ ಸಂಕೀರ್ತನೆ ಶ್ರೀ ಸುಬ್ರಹ್ಮಣೇಶ್ವರ ಭಜನಾ ಸಂಘ ಆರ್ಲಪದವು ಇವರಿಂದ, 9-00ರಿಂದ 10-30ರ ತನಕ ಯಕ್ಷಗಾನ ತಾಳಮದ್ದಳೆ – ʼಗಣೇಶೋದ್ಧವʼ ನಿರ್ದೇಶನ – ಶ್ರೀ ಬಾಲಕೃಷ್ಣ ಪೂಜಾರಿ ಉಡಂಗಳ ಶ್ರೀ ಸುಬ್ರಹ್ಮಣೇಶ್ವರ ಯಕ್ಷಗಾನ ಕಲಾ ಸಂಘ ಆರ್ಲಪದವು ಇದರ ಮಹಿಳಾ ಸದಸ್ಯರಿಂದ, ಬೆಳಿಗ್ಗೆ 10-30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ 12-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1-00ಕ್ಕೆ ಅನ್ನಸಂತರ್ಪಣೆ, ಮಧ್ಯಾಹ್ನ 1-30ರಿಂದ : ನೃತ್ಯಾರ್ಪಣೆ (ಭರತನಾಟ್ಯ ಮತ್ತು ನೃತ್ಯ ವೈವಿಧ್ಯ) ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿ ಪುತ್ತೂರು ವಿದ್ವಾನ್ ದೀಪಕ್ ಕುಮಾರ್ ಬಿ, ವಿದುಷಿ ಶ್ರೀಮತಿ ಪ್ರೀತಿಕಲಾ, ಮತ್ತು ವಿದ್ವಾನ್ ಗಿರೀಶ್ ಕುಮಾರ್ ಪುತ್ತೂರು ಇವರಿಂದ ನಡೆಯಲಿದೆ.