ಪುತ್ತೂರು: ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಧರ್ಮಸ್ಥಳ ಮಂಜು ಶ್ರೀ ಕಟ್ಟಡದಲ್ಲಿ ವ್ಯವಹರಿಸಿಕೊಂಡು ಬರುತ್ತಿರುವ ಪರಿವಾರ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿಗೆ 2024-25 ನೇ ಸಾಲಿನ ಅತ್ಯುತ್ತಮ ಸಾಧನೆಗಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಆ.30 ರಂದು ನಡೆದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಸೊಸೈಟಿಯ ಅಧ್ಯಕ್ಷ ಸಂತೋಷ್ ಕುಮಾರ್, ಮುಖ್ಯ ಕಾರ್ಯ ನಿರ್ವಹಣಾಽಕಾರಿ ಸುಧಾಕರ್ ಕೆ.ಪಿ. ಯವರಿಗೆ ಶಾಲು, ಹಾರ, ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಪರಿವಾರ ಸೊಸೈಟಿಯ ಉಪಾಧ್ಯಕ್ಷ ರತ್ನಾಕರ್ ನಾೖಕ್, ನಿರ್ದೇಶಕರಾದ ಸದಾಶಿವ ನಾೖಕ್, ರಾಖೇಶ್ ಕುಮಾರ್, ವನಿತಾ ನಾೖಕ್ ಉಪಸ್ಥಿತರಿದ್ದರು.