ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.31ರಂದು ಪ್ರತಿಷ್ಠಾ ವರ್ಧಂತಿ ವೆ.ಮೂ. ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯತು.

ಬೆಳಿಗ್ಗೆ ಪುಣ್ಯಾಹ, ಗಣಪತಿ ಹೋಮ, ನವಕಲಶಾರಾಧನೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ 5ರಿಂದ ಲಲಿತ ಸಹಸ್ರನಾಮ, ಶಿವಾನಂದ ಶೆಣೈ ಮತ್ತು ಬಳಗದವರಿಂದ ಭಜನಾ ಸಂಧ್ಯಾ, ಬಳಿಕ ರಾತ್ರಿ 8ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಫಲಹಾರ ನಡೆಯಿತು.
ಸನ್ಮಾನ: ಭಜನಾ ಮಂದಿರದ ನಿಕಟ ಪೂರ್ವ ಉಪಾಧ್ಶಕ್ಷ, ನಿವೃತ್ತ ಸೇನಾನಿ ಪಿ. ರಮೇಶ್ ಬಾಬುರವರ ತಂದೆ, ಮಂದಿರದ ಸ್ಥಾಪಕ ಸದಸ್ಯ ದಿ. ಸುಬ್ಬರಾಯ ಕಲ್ಲುರಾಯರವರ ಸ್ಮರಣಾರ್ಥವಾಗಿ ಗಾಯಕ ಶಿವಾನಂದ ಶೆಣೈಯವರನ್ನು ಸನ್ಮಾನಿಸಲಾಯಿತು. ರಮೇಶ್ ಬಾಬುರವರ ಅನುಪಸ್ಥಿತಿಯಲ್ಲಿ ಅವರ ಸೊಸೆ ಶ್ರುತಿ ಮತ್ತು ಅಳಿಯ ಗಿರೀಶ್ ಸನ್ಮಾನ ನೆರವೇರಿಸಿದರು.
ಮಂದಿರದ ಅಧ್ಯಕ್ಷ, ಉದ್ಯಮಿ ಕೆದಂಬಾಡಿಗುತ್ತು ಸೀತಾರಾಮ ರೈ, ಕಾರ್ಯದರ್ಶಿ ಜಯಂತ ಉರ್ಲಾಂಡಿ, ಉಪಾಧ್ಯಕ್ಷ ಯಶವಂತ ಆಚಾರ್ಯ, ಜತೆ ಕಾರ್ಯದರ್ಶಿಗಳಾದ ಸುಧೀರ್ ಕಲ್ಲಾರೆ, ಜಲಜಾಕ್ಷಿ ಹೆಗ್ಡೆ, ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯಕರಸೇವಕರ ತಂಡದ ಸದಸ್ಯರು, ಮಂದಿರದ ಪದಾಧಿಕಾರಿಗಳು ಉಪಸ್ಥಿತರಿದ್ದರು.