ಸೆ.5ಕ್ಕೆ ವಿಶ್ವಕರ್ಮ ಸಮಾಜಬಾಂಧವರಿಂದ ಆನೆಗುಂದಿ ಸರಸ್ವತಿ ಪೀಠಕ್ಕೆ ರಜತ ಹರಿವಾಣ, ಪಾದುಕೆ, ಪೀಠ ಸಮರ್ಪಣೆ – ಸಿದ್ಧತಾ ಸಭೆ

0

ಸೆ.4ಕ್ಕೆ ಭಕ್ತರಿಂದ ಪಾದುಕೆಗೆ ಪುಷ್ಪಾರ್ಚನೆ ಅವಕಾಶ
ಸೆ.5ಕ್ಕೆ ಬೆಳಿಗ್ಗೆ ಶ್ರೀ ಮಠಕ್ಕೆ ತೆರಳುವುದು

ಪುತ್ತೂರು: ಕಟಪಾಡಿಯಲ್ಲಿರುವ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಜಗದ್ಗುರು ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಯವರ 21ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಸಮಾಪ್ತಿಯಾಗುವ ಸಂದರ್ಭದಲ್ಲಿ ಆನೆಗುಂದಿ ಗುರುಸೇವಾ ಪರಿಷತ್ ಮಹಾಮಂಡಲ ಪುತ್ತೂರು ಇದರ ನೇತೃತ್ವದಲ್ಲಿ ಆನೆಗುಂದಿ ವಿಶ್ವಕರ್ಮ ಸಮಾಜಬಾಂಧವರಿಂದ ರಜತ ಹರಿವಾಣ, ಪಾದುಕೆ ಹಾಗೂ ಪೀಠವನ್ನು ಸೆ.5ರಂದು ಸಮರ್ಪಣೆ ಮಾಡಲಾಗುವುದು. ಈ ಕುರಿತು ವಿಶ್ವಕರ್ಮ ಸಭಾಭವನದಲ್ಲಿ ಆ.30 ರಂದು ಪೂರ್ವ ಸಿದ್ಧತೆ ಸಭೆ ನಡೆಸಲಾಯಿತು.


ಆನೆಗುಂದಿ ಗುರುಸೇವಾ ಪರಿಷತ್‌ನ ಪುತ್ತೂರು ತಾಲೂಕು ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಕ್ಕೆ ಸಮಾಜಬಾಂಧವರ ದೇಣಿಗೆಯ ಮೂಲಕ ನಿರ್ಮಿಸಿದ ರಜದ ಹರಿವಾಣ, ಪಾದುಕೆ ಮತ್ತು ಪೀಠವನ್ನು ಸೆ.5ರಂದು ಶ್ರೀ ಗುರುಗಳಿಗೆ ಸಮರ್ಪಣೆ ಮಾಡುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಸೆ.4ಕ್ಕೆ ಬೆಳಿಗ್ಗೆ ಗಂಟೆ 9.30 ರಿಂದ ಮಧ್ಯಾಹ್ನ 12.30ರ ತನಕ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಪಾದುಕೆಗೆ ಪುಷ್ಪಾರ್ಚಣೆ ಮಾಡಲು ಭಕ್ತರಿಗೆ ಅವಕಾಶ ಕಲ್ಪಿಸುವುದು ಮತ್ತು ಸೆ.5ಕ್ಕೆ ಬೆಳಿಗ್ಗೆ ಗಂಟೆ 7.30ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಆನೆಗುಂದಿ ಮಠಕ್ಕೆ ಹೊರಡುವುದು. ಈ ನಿಟ್ಟಿನಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಭೆಯಲ್ಲಿ ಅಧ್ಯಕ್ಷರು ತಿಳಿಸಿದರು.

ಗುರುದೇವಾ ಪರಿಷತ್‌ನ ಕಾರ್ಯದರ್ಶಿ ನಿರಂಜನ ಆಚಾರ್ಯ ಮರೀಲು, ಉಪಾಧ್ಯಕ್ಷ ಪ್ರಭಾಕರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ 9743083905, 9448501722 ಮತ್ತು 9844475793 ಅನ್ನು ಸಂಪರ್ಕಿಸುವಂತೆ ಗುರುದೇವ ಪರಿಷತ್‌ನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here