ಡಾ. ಅಶ್ವಿನ್ ಕಣ್ಣಿನ ಚಿಕಿತ್ಸಾಲಯ, ಅಪ್ಟಿಕಲ್ಸ್ ಶುಭಾರಂಭ

0

ಪುತ್ತೂರು: ನೇತ್ರ ತಜ್ಞ ಡಾ.ಅಶ್ವಿನ್ ಸಾಗರ್ ಅವರ ಕಣ್ಣಿನ ಪರೀಕ್ಷಾ ಕೇಂದ್ರ ಅಶ್ವಿನ್ ಕಣ್ಣಿನ ಚಿಕಿತ್ಸಾಲಯ ಮತ್ತು  ಆಪ್ಟಿಕಲ್ಸ್ ಪುತ್ತೂರಿನ ಅರುಣ ಕಲಾಮಂದಿರದ ಮುಂಭಾಗದಲ್ಲಿರುವ ಕಣ್ಣನ್ಸ್ ಕಾಂಪ್ಲೆಕ್ಸ್‌ನಲ್ಲಿ ಸೆ.೨ರಂದು  ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ಉದ್ಘಾಟಿಸಿದ ಸಂಪ್ಯ ಆನಂದಾಶ್ರಮ ಸೇವಾ ಟ್ರಸ್ಟ್ ನ ಅಧ್ಯಕ್ಷೆ ಡಾ. ಗೌರಿ ಪೈ ಮಾತನಾಡಿ, ಕಣ್ಣಿನ ಚಿಕಿತ್ಸಾ ವಿಭಾಗದಲ್ಲಿ ಉತ್ತಮ ಅಧ್ಯಯನ ಮಾಡಿ ಪುತ್ತೂರಿನಲ್ಲಿ ಚಿಕಿತ್ಸೆ ಪ್ರಾರಂಭಿಸಿದ್ದು ನಾನೇ ಪ್ರಥಮ ಚಿಕಿತ್ಸೆ ಪಡೆಯಲಿದ್ದೇನೆ ಎಂದರು.

ಯೇನಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ನೇತ್ರಾ ವಿಜ್ಞಾನ ವಿಭಾಗದ ಪ್ರೊಫೇಸರ್ ಡಾ.ಉಮಾ ಕುಲ್ಕರ್ಣಿ ಮಾತನಾಡಿ, ಉತ್ತಮ ವಿದ್ಯಾರ್ಥಿಯಾಗಿರುವ ಅಶ್ವಿನ್ ನ ಮೂಲಕ ಜನತೆಗೆ ಕಣ್ಣಿಗೆ ಸಂಬಂಧಿಸಿದ ಉತ್ತಮ ಸೇವೆ ದೊರೆಯಲಿ ಎಂದರು.

ಸಿಟಿ ಆಸ್ಪತ್ರೆಯ ಡಾ. ಭಾಸ್ಕರ್ ಮಾತನಾಡಿ, ಬಡಜನರ ಕಣ್ಣಿನ‌ಅಪರೇಷನ್,‌ಕನ್ನಡಕ ವಿತರಿಸಿರುವ ನೇತ್ರಾಧಿಕಾರಿಯವರ ಪುತ್ರ ಕಣ್ಣಿನ ಸ್ಪೆಷಾಲಿಸ್ಟ್ ಅಗಿ ಬರುತ್ತಿರುವುದು ಪುತ್ತೂರಿನ ಭಾಗ್ಯ. ಕಣ್ಣಿನ ತೊಂದರೆ ಉಳ್ಳವರಿಗೆ ಉತ್ತಮ ಚಿಕಿತ್ಸೆ ದೊರೆಯಲಿ ಎಂದರು. ಬಂಟ್ವಾಳ ತಾಲೂಕು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಸಿ.ಕೆ ಗೌಡ ಮಾತನಾಡಿ ಶುಭಹಾರೈಸಿದರು.

ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಅಧ್ಯಕ್ಷ ವಾಮನ್ ಪೈ, ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಚಿತ್ರಾ ರೈ, ಲಿಯೋ ಎಂಟರ್‌ಪ್ರೈಸಸ್‌ನ ಸಜನ್, ಆನಂದಾಶ್ರಮ ಸೇವಾ ಟ್ರಸ್ಟ್‌ನ ಟ್ರಸ್ಟೀ ಸದಾಶಿವ ಪೈ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಳಿಕ ಒಕ್ಕೂಟದ ಅಧ್ಯಕ್ಷ ಬಾಲಕರಷ್ಣ ಪೂಜಾರಿ ಸಣ್ಣಗುತ್ತು ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.

ಅಶ್ವಿನ್ ಒಪ್ಟಿಕಲ್ಸ್ ನ ಆಡಳಿತ ನಿರ್ದೇಶಕಿ ಬಿ.ಎಲ್ ಮಂಜುಳಾ, ಆಡಳಿತಾಧಿಕಾರಿ ಡಾ.ಎಸ್.ಎಂ ವಿಕಾಸ್ ಉಪಸ್ಥಿತರಿದ್ದರು.ನಿವೃತ್ತ ನೇತ್ರಾಧಿಕಾರಿ ಶಾಂತಾರಾಜ್ ಸ್ವಾಗತಿಸಿದರು. ಡಾ.ಎಸ್.ಎಂ ಅಶ್ವಿನ್ ಸಾಗರ್ ವಂದಿಸಿದರು.

LEAVE A REPLY

Please enter your comment!
Please enter your name here