ಪುತ್ತೂರು: ಪುರುಷರಕಟ್ಟೆ ಶಿವಕೃಪಾ ಕಟ್ಟಡದಲ್ಲಿ ಪ್ರಧಾನ ಕಛೇರಿ ಹೊಂದಿರುವ ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.5 ರಂದು ನರಿಮೊಗರು ಸೇವಾ ಸಹಕಾರಿ ಬ್ಯಾಂಕಿನ ರೈತ ಭವನದಲ್ಲಿ ಪೂರ್ವಾಹ್ನ ಜರಗಲಿದೆ.
ಅಧ್ಯಕ್ಷತೆಯನ್ನು ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ವಹಿಸಲಿದ್ದಾರೆ. ಮುಖ್ಯ ಅತಿಥಿ, ಬಿ.ಸಿ ರೋಡ್ ಮೂರ್ತೆದಾರರ ಸಹಕಾರಿ ಮಂಡಲದ ಅಧ್ಯಕ್ಷ ಸಂಜೀವ ಪೂಜಾರಿರವರು ಭಾಗವಹಿಸಲಿದ್ದಾರೆ ಎಂದು ಸಹಕಾರಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಪದ್ಮಾವತಿ ಮುಂಡೋಡಿ, ಕಾರ್ಯನಿರ್ವಹಣಾಧಿಕಾರಿ ಶ್ರೀಶನ್ ಎ(ಪ್ರಭಾರ) ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.