ರೋಟರಿ ಪುತ್ತೂರು ಸೆಂಟ್ರಲ್ ನಿಂದ ಶಿಕ್ಷಕರ ದಿನಾಚರಣೆ-ಸನ್ಮಾನ

0

ಶಿಕ್ಷಕರ ಕುರಿತು ಸಮಾಜದಲ್ಲಿ ವಿಶೇಷ ಗೌರವ- ಸುರೇಶ್ ಶೆಟ್ಟಿ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ವತಿಯಿಂದ ಸೆ‌.9ರಂದು ಸಮೃದ್ಧಿ ಸಭಾಂಗಣದಲ್ಲಿ ಈರ್ವರು ಹಿರಿಯ ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿ, ನಿವೃತ್ತ ಹಿರಿಯ ಶಿಕ್ಷಕರಾದ ಸುರೇಶ್ ಶೆಟ್ಟಿಯವರು ಈರ್ವರು ಹಿರಿಯ ಶಿಕ್ಷಕರಾದ ಇಬ್ರಾಹಿಂ ಎಸ್.ಎಂ ಹಾಗೂ ತಿಮ್ಮಪ್ಪ ಮಾಲೆತೋಡಿರವರನ್ನು ಸನ್ಮಾನಿಸಿ ಮಾತನಾಡಿ, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ಶಿಕ್ಷಕರ ಬಗ್ಗೆ ಅಪಾರ ಗೌರವ ಮತ್ತು ನಂಬಿಕೆಯನ್ನು ಹೊಂದಿದ್ದಾರೆ. ಶಿಕ್ಷಕರನ್ನು ಸಮಾಜದ ಮಾರ್ಗದರ್ಶಕರಾಗಿ ಮತ್ತು ಪ್ರೇರಕರಾಗಿ ಗುರುತಿಸಿ ಗೌರವಿಸುತ್ತಾ ಬಂದಿದ್ದಾರೆ. ಶಿಕ್ಷಕರು ತಮ್ಮ ನಡವಳಿಕೆ ಮತ್ತು ಹವ್ಯಾಸಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳಲು ಉತ್ತಮ ಉದಾಹರಣೆಯಾಗಬಲ್ಲರು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಇಬ್ರಾಹಿಂ ಎಸ್ ಎಂ ಮತ್ತು ತಿಮ್ಮಪ್ಪ ಮಾಲೆತ್ತೋಡಿರವರು,  ಶಿಕ್ಷಕರಾಗಿ ತಮ್ಮ ಪಯಣದ ಆರಂಭದಿಂದಲೇ ರೋಟರಿ ಸಂಸ್ಥೆಗಳ ಸಹಕಾರ ಇರುವುದನ್ನು ಸ್ಮರಿಸಿಕೊಂಡರು ಮತ್ತು ತಮ್ಮ ನವೀನ  ಯೋಜನೆಗಳ ಅನುಷ್ಠಾನ  ಕಾರ್ಯದಲ್ಲಿ ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಾ ಬಂದಿರುವ ಪೋಷಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಮಿತ್ರರ ಸಹಕಾರವನ್ನು ಸ್ಮರಿಸಿಕೊಂಡರು.

ಈ ಸಂದರ್ಭದಲ್ಲಿ ಕ್ಲಬ್ ಸದಸ್ಯರಾಗಿರುವ ಶಿಕ್ಷಕರಾದ ಡಾ. ರಾಜೇಶ್ ಬೆಜ್ಜಂಗಳ , ಡಾ. ರಾಮಚಂದ್ರ ,  ಭಾರತಿ ಎಸ್ ರೈ, ಗೀತಾ ವಸಂತ್, ಶಿವರಾಮ ಎಂ ಎಸ್ ಮತ್ತು ಜಗನ್ನಾಥ ಅರಿಯಡ್ಕ ಹಾಗೂ ಮುಖ್ಯ ಅತಿಥಿ, ಹಿರಿಯ ಶಿಕ್ಷಕರಾದ ಸುರೇಶ್ ಶೆಟ್ಟಿ ಇವರುಗಳನ್ನು ಅಭಿನಂದಿಸಿ ಗೌರವಿಸಲಾಯಿತು.  

ಕ್ಲಬ್ ಅಧ್ಯಕ್ಷ ಚಂದ್ರಹಾಸ ರೈ ಬಿ ಅಧ್ಯಕ್ಷತೆ ವಹಿಸಿದ್ದರು.  ಶಾಂತಕುಮಾರ್ ಪ್ರಾರ್ಥಿಸಿದರು ನಿಕಟಪೂರ್ವ ಅಧ್ಯಕ್ಷ  ಅಶ್ರಫ್ ಮುಕ್ವೆ ಸ್ವಾಗತಿಸಿ, ಕಾರ್ಯದರ್ಶಿ ಜಯಪ್ರಕಾಶ್ ಎ.ಎಲ್ ವಂದಿಸಿದರು. ಡಾ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here