ಬೆಥನಿ ಐಟಿಐ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

0

ದೇಶದ ಪ್ರಗತಿಗೆ ಕೌಶಲ್ಯ ಭರಿತ ತರಬೇತುದಾರರು ಇಂದು ಅನಿವಾರ್ಯ-ರೆ. ಡೀಕನ್ ಜಾರ್ಜ್ ಕೆ. ಎಂ.

ನೆಲ್ಯಾಡಿ : ದೇಶದ ಪ್ರಗತಿಗೆ ಕೌಶಲ್ಯ ಭರಿತ ತರಬೇತುದಾರರು ಇಂದು ಅನಿವಾರ್ಯ ಮತ್ತು ಅತೀ ಹೆಚ್ಚು ಬೇಡಿಕೆ ಇದೆ. ಪ್ರತಿಯೊಬ್ಬರೂ ತಮ್ಮ ಆಸಕ್ತಿಯ ವೃತ್ತಿ ಯಲ್ಲಿ ಕಷ್ಠ ಪಟ್ಟು ಮತ್ತು ಇಷ್ಟ ಪಟ್ಟು ತರಬೇತಿ ಪಡೆದಾಗ ಉತ್ತಮ ಭವಿಷ್ಯ ನಿರ್ಮಾಣ ಆಗುತ್ತದೆ. ತಮ್ಮ ತಮ್ಮ ವೃತ್ತಿ ಕೆಲಸದಲ್ಲಿ ಗೌರವ, ಸಮರ್ಪಿತಾ ಭಾವ ಮತ್ತು ಕೆಲಸವೆ ಪೂಜೆ ಆಗಬೇಕು ಎಂದು ಬಿಷಪ್ ಪೋಲಿ ಕಾರ್ಪಸ್ ಪಬ್ಲಿಕ್ ಸ್ಕೂಲ್ ಉದನೆ ಇದರ ಸಂಚಾಲಕ ಡೀಕನ್ ಜಾರ್ಜ್ ಕೆ. ಎಂ. ಹೇಳಿದರು.

ಅವರು ಬೆಥನಿ ಐಟಿಐ ಸಂಸ್ಥೆಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದರು.

ಬೆಥನಿ ವಿದ್ಯಾ ಸಂಸ್ಥೆಯ ಸಂಚಾಲಕ ರೆ. ಫಾ. ಡಾ. ವರ್ಗಿಸ್ ಕೈಪಿನಡ್ಕ ಓ ಐ ಸಿ ಅಧ್ಯಕ್ಷತೆ ವಹಿಸಿದರು .ನಿರ್ದೇಶಕ ರೆ. ಫಾ. ಜಾರ್ಜ್ ಸ್ಯಾಮುವೆಲ್ ಓ ಐ ಸಿ, ಪ್ರಾಚಾರ್ಯ ಸಜಿ ಕೆ ತೋಮಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ತರಬೇತಿ ಅಧಿಕಾರಿ ಜಾನ್ ಪಿ. ಎಸ್ ಸ್ವಾಗತಿಸಿ, ಕಿರಿಯ ತರಬೇತಿ ಅಧಿಕಾರಿ ಸುನಿಲ್ ಜೋಸೆಫ್ ವಂದಿಸಿದರು.ಕಿ. ತ. ಅಧಿಕಾರಿ ಹರಿಪ್ರಸಾದ್ ರೈ ಕಾರ್ಯಕ್ರಮ ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here