ಪುತ್ತೂರು: ಸವಣೂರು ಪೆರಿಯಡ್ಕ ಶ್ರೀ ಆದಿಶಕ್ತಿ ಭಜನಾ ಮಂಡಳಿ ಹಾಗೂ ಶ್ರೀ ಆದಿಶಕ್ತಿ ಉತ್ಸವ ಸಮಿತಿ ಪೆರಿಯಡ್ಕ ಇದರ ವತಿಯಿಂದ ನಡೆಯುವ 7ನೇ ವರ್ಷದ ಹಗ್ಗಜಗ್ಗಾಟ ಸ್ಪರ್ಧೆ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಸೆ.14 ಸವಣೂರು ಪೆರಿಯಡ್ಕ ಬಸ್ಸು ನಿಲ್ದಾಣ ಬಳಿ ನಡೆಯಿತು.
ಭಜನಾ ಮಂಡಳಿಯ ಗೌರವಾಧ್ಯಕ್ಷ ರಾಜರಾಮ ಪ್ರಭು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ತಾರನಾಥ ಕಾಯರ್ಗ, ಸವಣೂರು ಯುವಕ ಮಂಡಲದ ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಸತೀಶ್ ಬಲ್ಯಾಯ, ಸವಣೂರು ಅಂಬಾ ಬ್ರದರ್ಸ್ ಸಂಸ್ಥೆಯ ಬಾಲಚಂದ್ರ ರೈ ಕೆರೆಕೋಡಿ, ಶ್ರೀ ಶಾರದಾಂಬಾ ಸೇವಾ ಸಂಘ (ಸವಣೂರು ಅಧ್ಯಕ್ಷ ವಸಂತ ರೈ ಸೊರಕೆ, ಹಿಂದು ಜಾಗರಣ ವೇದಿಕೆಯ ತಾಲೂಕು ಸಂಯೋಜಕ ಕೀರ್ತನ್ ಕೋಡಿಬೈಲುರವರು ಆಗಮಿಸಿ ಆಮಂತ್ರಣ ಪತ್ರ ಬಿಡುಗಡೆ ಗೊಳಿಸಿ, ಶುಭಹಾರೈಸಿದರು.
ಉತ್ಸವ ಸಮಿತಿಯ ಅಧ್ಯಕ್ಷ ಯತೀಶ್ ಪೂವ, ಭಜನಾ ಮಂಡಳಿಯ ಅಧ್ಯಕ್ಷ ಜಗದೀಶ್ ಗೌಡ ಇಡ್ಯಾಡಿ, ಕಾರ್ಯದರ್ಶಿಗಳಾದ ಪ್ರವೀಣ್ ಪೆರಿಯಡ್ಕ, ಕಮಲಾಕ್ಷ ಪೆರಿಯಡ್ಕ, ಜೊತೆ ಕಾರ್ಯದರ್ಶಿಗಳಾದ ಚೇತನ್ ಇಡ್ಯಾಡಿ, ಶ್ರೀಧರ ಇಡ್ಯಾಡಿ ಹಾಗೂ ಸಮಿತಿಯ ಸದಸ್ಯರುಗಳಾದ ವಿಶ್ವನಾಥ ಪೂವ, ಯೋಗೀಶ್ ಪೂವ, ನೀಲಯ್ಯ ಪೂವ,ಗಂಗಾಧರ ಪೆರಿಯಡ್ಕ, ಮಹಾಬಲ ಪೆರಿಯಡ್ಕ, ಪ್ರಕಾಶ್ ಪೆರಿಯಡ್ಕ, ಸನತ್ ಇಡ್ಯಾಡಿ,ಸತೀಶ್ ಪೂವ, ಸುಂದರ ಪಣೆಮಜಲು, ಮನೋಹರ ಇಡ್ಯಾಡಿ, ಪವಿತ್ರಾ ಇಡ್ಯಾಡಿ, ಅಖಿಲ್ ಇಡ್ಯಾಡಿ, ದೀಕ್ಷಿತ್ ಪೂವ, ವರ್ತನ್ ಪೂವ, ಯಶನ್ ಪೂವ, ಯಕ್ಷಿತ್ ಪೂವ, ಕಿಶನ್ ಪೆರಿಯಡ್ಕ, ಹರ್ಷಿತ್ ಪೂವ,ಆರ್ಯ ಗೌಡ, ಜಗದೀಶ್ ಇಡ್ಯಾಡಿ, ರಾಜೇಶ್ ಇಡ್ಯಾಡಿ ಉಪಸ್ಥಿತರಿದ್ದರು.