ಬಾರ್ಯ ಶ್ರೀ ಮಹಾವಿಷ್ಣು ಕ್ಷೇತ್ರದ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಧಾರ್ಮಿಕ ಕೇಂದ್ರಗಳು ನಮ್ಮನ್ನು ಒಗ್ಗೂಡಿಸುತ್ತದೆ : ಸಂಜೀವ ಮಠಂದೂರು

ಪುತ್ತೂರು: ಭಗವಂತನ ಅನುಗ್ರಹವನ್ನು ಪಡೆಯಲು ಭಕ್ತಿಯೇ ಮುಖ್ಯ. ಭಕ್ತಿಯ ಮೂಲಕವೇ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರೆಲ್ಲ ಒಗ್ಗೂಡಿ ಪೂಜೆ ಉತ್ಸವ ಸತ್ಸಂಗದಲ್ಲಿ ಭಾಗವಹಿಸುವ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ಸಾಧ್ಯವೆಂದು ಪುತ್ತೂರು ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದರು.

ಉಪ್ಪಿನಂಗಡಿಗೆ ಸಮೀಪದ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಭದ್ರತಾ ಕೋಶದ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕ್ಷೇತ್ರದಲ್ಲಿ ನಡೆಯುವ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತೆಯರು ನವದುರ್ಗೆಯರ ರೂಪದಲ್ಲಿ ಸಮಾಜಕ್ಕೆ ಬರುವ ಕಂಟಕಗಳನ್ನು ದೂರ ಪಡಿಸುವ ಶಕ್ತಿ ಸ್ವರೂಪಿಗಳಾಗಬೇಕೆಂದು ತಿಳಿಸಿದರು.

ವೇದಿಕೆಯಲ್ಲಿ ಪುತ್ತೂರು ನಗರಸಭೆಯ ಸದಸ್ಯೆ ದೀಕ್ಷಾ ಪೈ, ಉಪ್ಪಿನಂಗಡಿಯ ಸಾಮಾಜಿಕ ಮುಂದಾಳು ಉಮೇಶ ಶೆಣೈ ರಾಮನಗರ, ದೇವಾಲಯದ ಟ್ರಸ್ಟಿನ ಕಾರ್ಯದರ್ಶಿ ಪ್ರಶಾಂತ ಪೈ, ಉಪಾಧ್ಯಕ್ಷ ನಾರಾಯಣಗೌಡ ಉಪಸ್ಥಿತರಿದ್ದರು.


ಪುತ್ತೂರು ಪಿ ಎಲ್ ಡಿ ಬ್ಯಾಂಕಿನ ನಿರ್ದೇಶಕ ಯುವರಾಜ್ ಪೆರಿಯತ್ತೋಡಿ, ಸ್ವರ್ಣ ಲತಾ ಭಾಸ್ಕರ್ ಅರ್ಚಕರಾದ ಗುರುಪ್ರಸಾದ್ ನೂರಿತ್ತಾಯ, ಟ್ರಸ್ಟಿಗಳಾದ ವಿಜಯಲಕ್ಷ್ಮಿ ರೈ ಶ್ರೀಮತಿ ನವೀನ,ರಾಮಣ್ಣಗೌಡ, ಗಣೇಶ. ಪಿ ಪುತ್ತಿಲ, ಮುಖ್ಯಮಂತ್ರಿಗಳ ಪೊಲೀಸ್ ಪದಕ ಪುರಸ್ಕೃತರಾದ ಪ್ರವೀಣ್ ಎಂ ಬಾರ್ಯ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಮಂಜುನಾಥ ಸಾಲಿಯಾನ್ ಮೊದಲಾದವರು ಭಾಗವಹಿಸಿದ್ದರು.

ಆಡಳಿತ ಟ್ರಸ್ಟಿನ ಅಧ್ಯಕ್ಷರಾದ ಭಾಸ್ಕರ ಬಾರ್ಯ ಪ್ರಸ್ತಾವನೆಗೈದು ಕ್ಷೇತ್ರದ ವತಿಯಿಂದ ಮಾಜಿ ಶಾಸಕರನ್ನು ಗೌರವಿಸಿದರು. ಟ್ರಸ್ಟ್ ಕೋಶಾಧಿಕಾರಿ ಸೇಸಪ್ಪ ಸಾಲಿಯಾನ್ ಬಾರ್ಯ ಸ್ವಾಗತಿಸಿ ಟ್ರಸ್ಟಿ ಶಿವರಾಮ ನಾಯ್ಕ್ ವಂದಿಸಿದರು. ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here