4.35 ಲಕ್ಷ ರೂ.ನಿವ್ವಳ ಲಾಭ | ಶೇ.20 ಡಿವಿಡೆಂಡ್, ಲೀ.ಹಾಲಿಗೆ 91 ಪೈಸೆ ಬೋನಸ್ ಘೋಷಣೆ
ಪೆರಾಬೆ: ಕಡಬ ತಾಲೂಕಿನ ಪೆರಾಬೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.18ರಂದು ಬೆಳಿಗ್ಗೆ ಸಂಘದ ವಠಾರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಕುಸುಮಾವತಿ ಬಿ.ಅವರು ಮಾತನಾಡಿ, 2024-25ನೇ ಸಾಲಿನಲ್ಲಿ 2,71,541.4ಲೀ.ಹಾಲು ಸಂಗ್ರಹವಾಗಿದೆ. ಹಾಲು, ಪಶುಆಹಾರ ವ್ಯಾಪಾರ ಹಾಗೂ ಇತರೇ ಆದಾಯಗಳಿಂದ ಬಂದಿರುವ ಲಾಭದಲ್ಲಿ ಖರ್ಚು ವೆಚ್ಚಗಳನ್ನು ಕಳೆದು ಸಂಘಕ್ಕೆ 4,35,824.36 ರೂ.ನಿವ್ವಳ ಲಾಭ ಬಂದಿದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.20ಡಿವಿಡೆಂಡ್ ಹಾಗೂ ಪ್ರತಿ ಲೀ. ಹಾಲಿಗೆ 91 ಪೈಸೆ ಬೋನಸ್ ನೀಡಲಾಗುವುದು ಎಂದು ಘೋಷಿಸಿದರು. ಸಂಘದ ಸದಸ್ಯರಿಗೆ ಪ್ರವಾಸ, ಅಧ್ಯಕ್ಷರು, ನಿರ್ದೇಶಕರು ಮೈಸೂರಿಗೆ ತರಬೇತಿಗೆ ಹೋಗುವುದು, ಸಂಘದ ಅಭಿವೃದ್ಧಿಗೆ ಶಿಬಿರ ಆಯೋಜಿಸುವ ಕುರಿತು ಸಭೆಗೆ ಮಾಹಿತಿ ನೀಡಲಾಯಿತು.
ದ.ಕ.ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಆದಿತ್ಯ ಚಿದ್ಗಲ್, ಪಶುವೈದ್ಯಾಧಿಕಾರಿ ಡಾ.ಸಚಿನ್ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಭವಾನಿ ಪಿ., ನಿರ್ದೇಶಕರಾದ ಲೀಲಾವತಿ ಎಸ್.ಶೆಟ್ಟಿ, ಪ್ರಕಾಶಿನಿ ವಿ.ಶೆಟ್ಟಿ, ಶಾರದಾ ಜಿ., ನಾಗವೇಣಿ, ಭವಾನಿ, ಶ್ವೇತಾ, ಚಂದ್ರಿಕಾ, ನಮಿತಾ ಎಸ್.ಎ., ಮಮತಾ ಜಿ.ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷತಾ ವರದಿ ವಾಚಿಸಿದರು. ಪ್ರಕಾಶಿನಿ ವಿ.ಶೆಟ್ಟಿ ಸ್ವಾಗತಿಸಿದರು. ಲೀಲಾವತಿ ಶೆಟ್ಟಿ ವಂದಿಸಿದರು. ಭವಾನಿ ಪ್ರಾರ್ಥಿಸಿದರು. ಹಾಲು ಪರೀಕ್ಷಕಿಯರಾದ ಪ್ರತಿಮಾ ಶೆಟ್ಟಿ, ನವ್ಯ, ಗೀತಾ, ಕೃ.ಗ.ಕಾರ್ಯಕರ್ತ ರತ್ನೇಶ್ ಸಹಕರಿಸಿದರು.
ಬಹುಮಾನ ವಿತರಣೆ
13,950 ಲೀ.ಹಾಲು ಪೂರೈಸಿದ ನಮಿತಾ ಎಸ್.(ಪ್ರಥಮ), 11,360 ಲೀ.ಹಾಲು ಪೂರೈಸಿದ ಮಾಲಿನಿ ಶೆಟ್ಟಿ(ದ್ವಿತೀಯ)ಹಾಗೂ 7445 ಲೀ.ಹಾಲು ಪೂರೈಸಿದ ರುಕ್ಮಿಣಿ ಕೆ.(ತೃತೀಯ)ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಂಘದ ಸದಸ್ಯೆಯರ ಮಕ್ಕಳಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು.