ಸಮರ್ಥ ಜನಸೇವಾ ಟ್ರಸ್ಟ್‌ ನಿಂದ ಹಿರಿಯ ನಾಗರಿಕರ ಸೇವಾ ಆಶ್ರಮಕ್ಕೆ ದೇಣಿಗೆ ಕೊಡುಗೆ

0

ಪುತ್ತೂರು: ಸಮರ್ಥ ಜನಸೇವಾ ಟ್ರಸ್ಟ್‌ ಪುಣ್ಚಪ್ಪಾಡಿ ಇದರ ವತಿಯಿಂದ ಶರಧಿ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ನಡೆಸುವ ಪ್ರೇರಣಾ ವಿಶೇಷ ಮಕ್ಕಳ ಶಾಲೆ ಮತ್ತು ವಸತಿ, ಪ್ರೇರಣಾ ಕೌಶಲ್ಯ ಅಭಿವೃದ್ಧಿ ಕೇಂದ್ರ, ಪ್ರೇರಣಾ ಹಿರಿಯ ನಾಗರಿಕ ಸೇವಾ ಆಶ್ರಮವು ಸವಣೂರಿನ ವಿದ್ಯಾರಶ್ಮಿ ಆವರಣದ ಹೆಣ್ಣುಮಕ್ಕಳ ವಸತಿ ನಿಲಯದ ಕಟ್ಟಡದಲ್ಲಿ ಕಳೆದ 8 ತಿಂಗಳಿನಿಂದ ನಡೆಸಿಕೊಂಡು ಬರುತ್ತಿರುವ ಆಶ್ರಮಕ್ಕೆ ಸಮರ್ಥ ಜನಸೇವಾ ಟ್ರಸ್ಟ್‌ ವತಿಯಿಂದ ದೇಣಿಗೆಯನ್ನು ನೀಡಲಾಯಿತು.

ಸಮರ್ಥ ಜನಸೇವಾ ಟ್ರಸ್ಟ್‌ನ ಅಧ್ಯಕ್ಷ ಗಿರಿಶಂಕರ ಸುಲಾಯ ಸಮರ್ಥ ಜನಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಮಹೇಶ್‌ ಕೆ ಸವಣೂರು, ರಾಜ್ಯ ಪ್ರಶಸ್ತಿ ಪ್ರರಸ್ಕೃತ ಸವಣೂರು ಯುವಕಮಂಡಲದ ಅಧ್ಯಕ್ಷ ಚೇತನ್‌ ಕುಮಾರ್‌ ಕೋಡಿಬೈಲು, ಸವಣೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸತೀಶ್‌ ಬಲ್ಯಾಯ ಹಾಗೂ ಆಶ್ರಮದ ಸಿಬ್ಬಂದಿಗಳು, ಆಶ್ರಮವಾಸಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here