ಪುತ್ತೂರು: ಸರ್ವ ಕಾಲೇಜು ವಿದ್ಯಾರ್ಥಿ ಸಂಘ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರಾಗಿ ಪುತ್ತೂರಿನ ರೂಪರಾಜ್ ಮೊಗಪ್ಪೆ ರವರು ಆಯ್ಕೆಯಾಗಿದ್ದಾರೆ.
ಎನ್ಎಸ್ಯುಐ ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಇವರು ವಿದ್ಯಾರ್ಥಿ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರೂಪರಾಜ್ ರವರು ಕೊಳ್ತಿಗೆ ಗ್ರಾಮದ ಮೊಗಪ್ಪೆ ನಿವಾಸಿ ಜೀವರಾಜ್ ಮೊಗಪ್ಪೆ ಮತ್ತು ಲಲಿತ ದಂಪತಿಗಳ ಪುತ್ರ.