





ಪುತ್ತೂರು: ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ ಪಾಪೆಮಜಲು ಇಲ್ಲಿನ 14 ರ ಬಾಲಕಿಯರು ತಂಡ ಪ್ರಶಸ್ತಿ ಪಡೆದಿದ್ದಾರೆ. ೮ನೇ ತರಗತಿಯ ಕೆ ವಿ ಲಾಸ್ಯ 2೦೦ಮೀ ಪ್ರಥಮ, 4*100ರಿಲೇ ಪ್ರಥಮ, ಖುಷಿ ಪಿ ಗುಂಡು ಎಸೆತ ದ್ವಿತೀಯ, ಚಕ್ರ ಎಸೆತ ದ್ವಿತೀಯ, ಸಿಂಚನ ಎಂ ಎಸ್, ಹರ್ಷಿಣಿ ಬಿ ಎಸ್, ತನ್ವಿತಾ ಯು 4*100 ರಿಲೇ ಪ್ರಥಮ ಸ್ಥಾನ ಪಡೆದು ಪ್ರಿಯದರ್ಶಿನಿ ಬೆಟ್ಟಂಪಾಡಿ ಇಲ್ಲಿ ನಡೆಯುವ ತಾಲೂಕು ಮಟ್ಟಕ್ಕೆ ಆಯ್ಕೆ ಪಡೆದಿದ್ದಾರೆ.



14ರ ಬಾಲಕರ ವಿಭಾಗದಲ್ಲಿ ಅಭಿಷೇಕ್ ಎಸ್ ಚಕ್ರ ಎಸೆತ ಪ್ರಥಮ ಸ್ಥಾನ, ಚಿಂತನ್ ಸಿ ಕೆ, ಘೋಷಲ್, ಅಭಿಷೇಕ್, ಲಿಖಿತ್ 4*100ರಿಲೇ ತೃತೀಯ ಸ್ಥಾನ, 17ರ ಬಾಲಕಿಯರ ವಿಭಾಗದಲ್ಲಿ ನಮಿತಕುಮಾರಿ 100ಮೀ ಓಟದಲ್ಲಿ ಪ್ರಥಮ ಸ್ಥಾನ, 200ಮೀಟರ್ ದ್ವಿತೀಯ 4*100 ರಿಲೇ ಮತ್ತು 4*400 ರಿಲೇಯಲ್ಲಿ ದ್ವಿತೀಯ, ವಿನುತಾ ಬಿ 4*4೦೦ ರಿಲೇಯಲ್ಲಿ ದ್ವಿತೀಯ, ವರ್ಷಾ ಬಿ ಲೇಹನಾ, ರಶ್ಮಿ 4*100 ರಿಲೇ ಮತ್ತು 4*4೦೦ ರಿಲೇಯಲ್ಲಿ ದ್ವಿತೀಯ, 17ರ ಬಾಲಕರ ವಿಭಾಗದಲ್ಲಿ ಹರ್ಷತ್ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಸ್ಥಾನ, ಜೀವನ್ , ಭವಿತ್, ಯುವರಾಜ್, ದೀಪಕ್ 4*100 ರಿಲೇ ಮತ್ತು 4*4೦೦ ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.








