





ಪುತ್ತೂರಿನ ರಾಮಕೃಷ್ಣ ಆಶ್ರಮಕ್ಕೆ 10 ಕಾಟ್ ಕೊಡುಗೆ


ಪುತ್ತೂರು: ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ನ ಸಂಸ್ಥಾಪಕ ಜಿ.ಎಲ್.ಆಚಾರ್ಯ ಅವರ 101ನೇ ಜನ್ಮದಿನದ ಪ್ರಯುಕ್ತ ನ.13 ರಂದು ಪುತ್ತೂರಿನ ರಾಮಕೃಷ್ಣ ಆಶ್ರಮಕ್ಕೆ 10 ಕಾಟ್ಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಕಾಟ್ಗಳು ಒಟ್ಟು 20 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಈ ವೇಳೆ ಜ್ಯುವೆಲ್ಲರ್ಸ್ನ ಆಡಳಿತ ನಿರ್ದೇಶಕ ಜಿಎಲ್ ಬಲರಾಮ ಆಚಾರ್ಯ, ಆಶ್ರಮದ ಕಾರ್ಯದರ್ಶಿ ಗುಣಪಾಲ್ ಜೈನ್, ಸದಸ್ಯರಾದ ಹರೇಕೃಷ್ಣ ಕಡಂಬಲಿತ್ತಾಯ, ಜಂಟಿ ಕಾರ್ಯದರ್ಶಿ ವತ್ಸಲ ರಾಜ್ನಿ ಉಪಸ್ಥಿತರಿದ್ದರು.





ಜಿಎಲ್ ಆಚಾರ್ಯ ಅವರು ಕೊಡುಗೈ ದಾನಿ ಎಂದೇ ಪ್ರಸಿದ್ಧಿ ಪಡೆದಿದ್ದರು. ಅವರು ತಮ್ಮ ಆದಾಯದಲ್ಲಿ ಒಂದಂಶವನ್ನು ಸಮಾಜಕ್ಕಾಗಿ ಮೀಸಲಿಡುತ್ತಿದ್ದರು. ಇಂದು ಇವರ ಮಗ ಬಲರಾಮ ಆಚಾರ್ಯ, ಮೊಮ್ಮಕ್ಕಳಾದ ಲಕ್ಷ್ಮೀಕಾಂತ ಆಚಾರ್ಯ, ಸುಧನ್ವ ಆಚಾರ್ಯ ಅವರು ಸಂಸ್ಥೆಯನ್ನು ಮುನ್ನಡೆಸುತ್ತಿದ್ದು, ಸಂಸ್ಥಾಪಕರ ನಡೆಯಲ್ಲಿಯೇ ಸಾಗುತ್ತಿದ್ದಾರೆ. ಸಂಸ್ಥೆಯ ಆದಾಯದಲ್ಲಿ ಒಂದಿಷ್ಟು ಆದಾಯವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದಾರೆ.










