ಡಿ.14ರಂದು ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ ದಶ ಸಂಭ್ರಮ : ಸನ್ಮಾನ, ಪ್ರಶಸ್ತಿ ಪ್ರಧಾನ

0

ಪೆರ್ನಾಜೆ: ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ 10 ವರ್ಷಗಳನ್ನು ಪೂರೈಸಿದ ಸಲುವಾಗಿ ಡಿಸೆಂಬರ್ 14ರಂದು ವಿಟ್ಲದ ಜೆ ಎಲ್ ಆಡಿಟೋರಿಯಂನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ದಶ ಸಂಭ್ರಮ ನಡೆಯಲಿದೆ.


ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರ್ ದೀಪ ಪ್ರಜ್ವಲನೆ, ರವಿಶಂಕರ್ ಸಿ ಮೂಡಂಬೈಲು ಸಮಾರಂಭದ ಅಧ್ಯಕ್ಷರು ದಶಮಾನೋತ್ಸವ ಸಮಿತಿ ಅಧ್ಯಕ್ಷರು, ಸ್ವರ ಸಿಂಚನ ಸಂಗೀತ ಶಾಲೆ ವಿಶೇಷ ಆಹ್ವಾನಿತರಾಗಿ ವಿಟ್ಲ ಅರಮನೆಯ ಕೆ ಕೃಷ್ಣಯ್ಯ, ವ್ಯವಸ್ಥಾಪಕರು ಶ್ರೀ ಭಗವತಿ ದೇವಸ್ಥಾನದ ವಿಟ್ಲ, ಕೇಶವ್ ಆರ್ ವಿ, ರಾಜ್ಯಪ್ರಶಸ್ತಿ ಪುರಸ್ಕೃತ ಬರಹಗಾರರು, ಜೇನುಗಡ್ಡದಾರಿ ಕಲಾ ಪೋಷಕ ಕಲಾ ನಿರ್ದೇಶಕರಾದ ಕುಮಾರ ಪೆರ್ನಾಜೆ ಭಾಗವಹಿಸಲಿದ್ದಾರೆ.

ಸನ್ಮಾನ
“ಸ್ವರ ಸಿಂಚನ” ಪುರಸ್ಕಾರ ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರ ಪಿಟೀಲು ವಾದಕ, ಎಸ್ ಎಲ್ ಗೋವಿಂದ ನಾಯಕ್ ಪಾಲೆಚ್ಚಾರು, ಹಿರಿಯ ಯಕ್ಷಗಾನ ಭಾಗವತರು ಹಾಗೂ ಗುರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ವಯಲಿನ್ ಕಚೇರಿ, ಸಿಂಚನ ಲಕ್ಷ್ಮಿ ಕೊಡಂದೂರು (ಸಹ ಶಿಕ್ಷಕಿ) ಇವರಿಂದ ಸಂಗೀತ ಹಾಗೂ ವಯಲಿನ್ ಜುಗಲ್ ಬಂದಿ ನಡೆಯಲಿದ್ದು, ಪಕ್ಕ ವಾದ್ಯದಲ್ಲಿ ಮೃದಂಗವಾದಕರಾಗಿ ವಿದ್ವಾನ್ ಡಾ.ವಿ.ಆರ್ ನಾರಾಯಣ ಪ್ರಕಾಶ್ ಕ್ಯಾಲಿಕಟ್, ಪಿಟೀಲು ವಾದಕರಾಗಿ ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರ್, ಘಟಂ ವಾದಕರಾಗಿ ವಿದ್ವಾನ್ ಆಲುವ ರಾಜೇಶ್ ಕ್ಯಾಲಿಕಟ್ ಮೃದಂಗ, ಕ್ಶಿತೀಶ ರಾಮ ಕೆ ಎಸ್ ಸುಳ್ಯ,ಪಿಟೀಲು ಅಭಿರಾಮ್ ಕೋಡಂಪಳ್ಳಿ ನಿರೂಪಣೆ ಪದ್ಮರಾಜ ಚಾರ್ವಾಕ ನಮ್ಮ ಹೆಮ್ಮೆಯ ಹಿಮ್ಮೇಳ ಕಲಾವಿದರು ದಿನಪೂರ್ತಿ ಸಂಗೀತದ ರಸದೌತಣ ನೀಡಲಿರುವ ಸ್ವರಸಿಂಚನ ಕಲಾತಂಡದ ಮುಖ್ಯ ಶಿಕ್ಷಕಿ ಸವಿತಾ ಕೊಡಂದೂರು ರಘುರಾಮ ಶಾಸ್ತ್ರಿ ಕೊಡಂದೂರು, ಕುಮಾರಿ ಸಿಂಚನ ಲಕ್ಷ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here