




ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ನರಿಮೊಗರು, ಸ.ಉ.ಹಿ.ಪ್ರಾ. ಶಾಲೆ ನರಿಮೊಗರು ಇವುಗಳ ಆಶ್ರಯದಲ್ಲಿ ನಡೆದ ಸವಣೂರು ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಾಂದೀಪನಿ ವಿದ್ಯಾ ಸಂಸ್ಥೆ ನರಿಮೊಗರು ಇಲ್ಲಿನ ಪ್ರೌಢ ಶಾಲಾ ವಿಭಾಗವು ಪ್ರಥಮ ಸಮಗ್ರ ಪ್ರಶಸ್ತಿಯನ್ನು ಗಳಿಸಿಕೊಂಡಿರುತ್ತದೆ.




ವಿಜೇತರಾದ ಪ್ರೌಢ ವಿದ್ಯಾರ್ಥಿಗಳ ವಿವರ:
ಧಾರ್ಮಿಕ ಪಠಣ ಪೃಥ್ವಿ ಕೃಷ್ಣ 9ನೇ ತರಗತಿ ಪ್ರಥಮ ಸ್ಥಾನ,ಭಾವಗೀತೆ ಆರಾಧ್ಯ ಸಿ ಯು 9ನೇ ತರಗತಿ ಪ್ರಥಮ ಸ್ಥಾನ,ಇಂಗ್ಲಿಷ್ ಭಾಷಣ ತನ್ಮಯಿ ಎಸ್ ಆರ್ 10ನೇ ತರಗತಿ ಪ್ರಥಮ ಸ್ಥಾನ, ಹಿಂದಿ ಭಾಷಣ ಯಜ್ಞ ಜೆ ಎಸ್ 10ನೇ ತರಗತಿ ಪ್ರಥಮ ಸ್ಥಾನ, ಭರತ ನಾಟ್ಯ ಜ್ಞಾನ ರೈ 9ನೇ ತರಗತಿ ಪ್ರಥಮ ಸ್ಥಾನ, ರಸಪ್ರಶ್ನೆ ಸರ್ವದ್ ಜೆ ನಾಯಕ್ ಮತ್ತು ಸಾತ್ವಿಕ್ ಕೃಷ್ಣ 10ನೇ ತರಗತಿ ಪ್ರಥಮ ಸ್ಥಾನ, ಗಝಲ್ – ವಿಶಾಖಾ ಪಿ 9ನೇ ತರಗತಿ ಪ್ರಥಮ ಸ್ಥಾನ, ಚಿತ್ರಕಲೆ ಧನ್ವಿತ್ ಕುಲಾಲ್ 9ನೇ ತರಗತಿ ಪ್ರಥಮ ಸ್ಥಾನ,ವಿಶಾಖಾ ಪಿ, ಸಾನಿಧ್ಯ, ವಿಷ್ಮಾ ಬಿ ಎಸ್ , ಹಂಸಿಕಾ, ಹಸ್ತಾ ಬಿ ಶೆಟ್ಟಿ , ವೈಷ್ಣ 9ನೇ ತರಗತಿ ಇವರ ತಂಡವು ಕವ್ವಾಲಿಯಲ್ಲಿ ಪ್ರಥಮ ಸ್ಥಾನ, ಚರ್ಚಾ ಸ್ಪರ್ಧೆ -ಶಿಬಾನಿ 10ನೇ ತರಗತಿ ದ್ವಿತೀಯ ಸ್ಥಾನ, ಕನ್ನಡ ಭಾಷಣ ಜ್ಞಾನ ರೈ 9ನೇ ತರಗತಿ ದ್ವಿತೀಯ ಸ್ಥಾನ, ಸಂಸ್ಕೃತ ಭಾಷಣ ಸಿಂಚಿತ ಪಿ 9ನೇ ತರಗತಿ ದ್ವಿತೀಯ ಸ್ಥಾನ,ಜನಪದ ನೃತ್ಯ ಜ್ಞಾನ ರೈ, ದಾನ್ವಿ ಶೆಟ್ಟಿ, ಸಮೀಕ್ಷಾ, ಸಮೃದ್ಧಿ ಕೆ, ದಾನ್ವಿ ಪಿ, ಶ್ರಾವಣಿ 9ನೇ ತರಗತಿ ದ್ವಿತೀಯ ಸ್ಥಾನಗಳನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ಪಡೆದು ತಾಲೂಕು ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿರುತ್ತಾರೆ.





ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ಶಿಕ್ಷಕ ವೃಂದಕ್ಕೆ ಶಾಲಾ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮತ್ತು ಆಡಳಿತ ಮಂಡಳಿ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ ಎಂದು ಶಾಲಾ ಮುಖ್ಯ ಗುರು ಪ್ರಸನ್ನ ಕೆ ಶಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









