




ಪುತ್ತೂರು :ದರ್ಬೆ ಸಂತ ಫಿಲೋಮಿನಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ “ನಮ್ಮ ಶಾಲೆ ಸಾಮೆತ್ತಡ್ಕ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಮೆತ್ತಡ್ಕ “ಇಲ್ಲಿನ ವಿದ್ಯಾರ್ಥಿಗಳಾದ 5ನೇ ತರಗತಿಯ ಶಝ್ಮ ಫಾತಿಮಾ ಹಿರಿಯರ ವಿಭಾಗದ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.



7ನೇ ತರಗತಿಯ ನೀಲ್ ಡಿಯೋನ್ ಪಸನ್ನ ಹಿರಿಯರ ವಿಭಾಗದ ಮಿಮಿಕ್ರಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಹಾಗೂ 2ನೇ ತರಗತಿಯ ಪರೀಕ್ಷಿತ್ ಎಸ್ ಎನ್ ಕಿರಿಯರ ವಿಭಾಗದ ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.














