ಜೆಸಿಐ ವಲಯ 15ಕ್ಕೆ ಸುಹಾಸ್ ಮರಿಕೆ ಮತ್ತು ಭಾಗ್ಯೇಶ್ ರೈ ಆಯ್ಕೆ

0

ಪುತ್ತೂರು : ಪ್ರತಿಷ್ಠಿತ ಅಂತರಾಷ್ಟ್ರೀಯ ಮಟ್ಟದ ತರಬೇತಿ ಮತ್ತು ವ್ಯಕ್ತಿತ್ವ ವಿಕಸನ ಸಂಸ್ಥೆಯಾದ JCI India ಇದರ ವಲಯ 15ರ ನೂತನ ವಲಯಾಡಳಿತ ಮಂಡಳಿಗೆ ಜೆಸಿಐ ಪುತ್ತೂರು ಘಟಕದ ಪೂರ್ವಧ್ಯಕ್ಷ, ವಲಯ ಉಪಾಧ್ಯಕ್ಷರಾಗಿದ್ದ ಸೆನೆಟರ್ ಸುಹಾಸ್ ಮರಿಕೆರವರು ವಲಯ ನಿರ್ದೇಶರಾಗಿ ಆಡಳಿತ ವಿಭಾಗಕ್ಕೆ ನೇಮಕಗೊಂಡಿದ್ದಾರೆ, ಇವರು ಮರಿಕೆ ಸಾವಯವ ಇದರ ಮಾಲಿಕರಾಗಿದ್ದಾರೆ.


ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರು, ಜೆಸಿಐ ಪುತ್ತೂರು ಘಟಕದ 2025ನೇ ಸಾಲಿನ ಅಧ್ಯಕ್ಷ JFA ಭಾಗ್ಯೇಶ್ ರೈ ರವರು ಜೆಸಿಐ ವಲಯ 15ರ ನಾಯಕತ್ವ ಮತ್ತು ಇತರ ತರಬೇತಿಗಳ ವಲಯ ಸಂಯೋಜಕರಾಗಿ ಆಯ್ಕೆಯಾಗಿದ್ದಾರೆ.


ಡಿ.13ರಂದು ವಿಟ್ಲದ ಶತಮಾನೋತ್ಸವ ಸ್ಮಾರಕ ಸಭಾ ಭವನ ಇಲ್ಲಿ ನಡೆದ ವಲಯ 15ರ ನೂತನ ವಲಯಾಧ್ಯಕ್ಷರಾದ JFF ಸಂತೋಷ್ ಶೆಟ್ಟಿರವರ ಮತ್ತು ವಲಯಾಡಳಿತ ಮಂಡಳಿಯ ಪದಗ್ರಹಣ ಸಮಾರಂಭದಲ್ಲಿ ಸೆನೆಟರ್ ಸುಹಾಸ್ ಮರಿಕೆರವರಿಗೆ ಹಾಗೂ JFA ಭಾಗ್ಯೇಶ್ ರೈ ರವರಿಗೆ ವಲಯಾಧ್ಯಕ್ಷರಾದ JFF ಸಂತೋಷ್ ಶೆಟ್ಟಿರವರು ನಿಯುಕ್ತಿ ಪತ್ರವನ್ನು ವಿತರಿಸಿ ಪ್ರಮಾಣವಚನ ಭೋದಿಸಿದರು.

LEAVE A REPLY

Please enter your comment!
Please enter your name here