






ಪುತ್ತೂರು: ರಝಾನಗರ ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ನಲ್ಲಿ ಡಿ.20ರಂದು ತರಬೇತಿ ಕಾರ್ಯಕ್ರಮ ನಡೆಯಿತು. ರಾಷ್ಟ್ರಮಟ್ಟದ ತರಬೇತುದಾರರಾದ ರಫೀಕ್ ಮಾಸ್ಟರ್ ರವರು ಎಸ್ ಎಸ್.ಎಲ್.ಸಿ ಮತ್ತು ಒಂಭತ್ತನೇ ತರಗತಿಯ ಮಕ್ಕಳಿಗೆ ಪ್ರೇರಣಾ( Motivational)ತರಬೇತಿ ನೀಡಿದರು.


ಈ ತರಬೇತಿಯಲ್ಲಿ ಆತ್ಮಧೈರ್ಯ (self confidence) , ಆತ್ಮವಿಶ್ವಾಸ, ಹಿರಿಯರಿಗೆ ಹೇಗೆ ಗೌರವ ಕೊಡುವುದು? ಹೆತ್ತವರ ಜೊತೆ ಹೇಗಿರಬೇಕು? ಹಿರಿಯರ ಆರ್ಶೀವಾದ ಹೇಗೆ ಪಡೆಯಬೇಕು?ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿ ಮತ್ತು ಸಾಧನೆ ,ಗೆಳೆತನ ಮಾಡುವಾಗ ಅವರ ಗುಣ, ನಡತೆ , ಧೃಡತೆ, ಮೌಲ್ಯವ ಸರಿಯಾಗಿ ನೋಡಿಕೊಳ್ಳಬೇಕು ಎಂದು ಮಕ್ಕಳಿಗೆ ಮನದಟ್ಟು ಮಾಡಿದರು.




ಕತ್ತಲೆ ತುಂಬಿದ ಮಕ್ಕಳ ಬದುಕಿಗೆ ಆತ್ಮಜ್ಯೋತಿಯನ್ನು ಉರಿಸಬಲ್ಲ ಏಕೈಕ ವ್ಯಕ್ತಿಯೇ ಶಿಕ್ಷಕ ಎಂಬುದನ್ನು ಹಲವಾರು ಚಟುವಟಿಕೆಗಳ ( Activity) ಮೂಲಕ ಮಕ್ಕಳಿಗೆ ಅರ್ಥವಾಗುವಂತೆ ಹೇಳಿಕೊಟ್ಟರು. ಈ ತರಬೇತಿಯಲ್ಲಿ ಒಟ್ಟು 70 ಮಕ್ಕಳು, 6 ಶಿಕ್ಷಕರು ಭಾಗವಹಿಸಿದರು. ಶಿಕ್ಷಕ ಜಲಾಲುದ್ದೀನ್ ಕಾರ್ಯಕ್ರಮದ ಸ್ವಾಗತಿಸಿ, ವ್ಯಕ್ತಿ ಪರಿಚಯಿಸಿದರು. ಶಾಲಾ ಸಂಚಾಲಕ ಶೇಕ್ ರಹಮತುಲ್ಲಾ ಹಾಗೂ ಮುಖ್ಯಶಿಕ್ಷಕಿ ಜಯಶ್ರೀಯವರು ಉಪಸ್ಥಿತರಿದ್ದರು.ಎಲ್ಸಿ ವಿ.ಕೆ. ಕಾರ್ಯಕ್ರಮ ನಿರೂಪಿಸಿದರು.










