ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಗರ ಸಂಕೀರ್ತನೆ

0

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 90ನೇ ವರ್ಷದ ನಗರ ಸಂಕೀರ್ತನೆಯು ಡಿ.20ರಂದು ರಾತ್ರಿ ಆರಂಭಗೊಂಡಿತು. ಪ್ರತಿರಾತ್ರಿ ಮಂದಿರದಿಂದ ಹೊರಟು ಮಹಾಲಿಂಗೇಶ್ವರ ದೇವಸ್ಥಾನದ ಹೊರಾಂಗಣ 3 ಸುತ್ತು ಸಾಗಿ ನಂತರ ಮಂದಿರದಲ್ಲಿ ಮಂಗಳಾಚರಣೆಯೊಂದಿಗೆ ಕೊನೆಗೊಳ್ಳಲಿರುವುದು.


ಈ ಸಂದರ್ಭದಲ್ಲಿ ಮಂದಿರದ ಅರ್ಚಕ ತಿರುಮಲೇಶ್ವರ ಭಟ್, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಉಪಾಧ್ಯಕ್ಷ ಯಶವಂತ ಆಚಾರ್ಯ, ನಿವೃತ್ತ ಎ.ಎಸ್.ಐ. ರಘುರಾಮ ಹೆಗ್ಡೆ ಉರ್ಲಾಂಡಿ, ಸದಸ್ಯರುಗಳಾದ ಫಕೀರ ಗೌಡ, ಜಯಕಿರಣ್ ಉರ್ಲಾಂಡಿ, ಪುಷ್ಪರಾಜ್ ಹೆಗ್ಡೆ ಉರ್ಲಾಂಡಿ, ಗುಲಾಬಿ ಗೌಡ, ಹರಿಣಿ ಗೌಡ, ಕರಣ್ ಗೌಡ, ಭರತ್, ತನ್ವಿಶ್, ಚಿರಾಗ್ ಮತ್ತಿತರರು ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here