ಸುದಾನ ಶಾಲೆಯಲ್ಲಿ ಜ್ಯೂನಿಯರ್ ವಿಭಾಗದ ವಾರ್ಷಿಕೋತ್ಸವ

0

ಉತ್ತಮ ಜ್ಞಾನವಂತರಾಗುವುದೇ ವಿದ್ಯಾರ್ಥಿಗಳ ಗುರಿಯಾಗಲಿ-ಮಾ.ವಿರಾಟ್ ಕೃಷ್ಣ

ಸುದಾನ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬೆಳೆಸುತ್ತದೆ-ಶಿವಾನಿ ಗೌಡ

ಪುತ್ತೂರು: ದಾನಗಳಲ್ಲಿ ಶ್ರೇಷ್ಟವಾದುದು ವಿದ್ಯಾ ದಾನ. ಅದು ದಾನ ಮಾಡಿದವರನ್ನು, ದಾನ ಪಡೆದವರನ್ನು  ಬೆಳೆಸುತ್ತದೆ.  ವಿದ್ಯಾರ್ಥಿಯು ತರಗತಿಯಿಂದ ಮಾತ್ರ ಜ್ಞಾನವನ್ನು ಪಡೆಯುವುದಲ್ಲ. ಉತ್ತಮವಾದುದನ್ನು ನೋಡಿ, ಕೇಳಿ, ಓದಿ ಕಲಿಯುವುದು ಇದೆ. ಉತ್ತಮ ಜ್ಞಾನವಂತರಾಗುವುದೇ ಎಲ್ಲಾ ವಿದ್ಯಾರ್ಥಿಗಳ ಗುರಿಯಾಗಬೇಕು. ನಾವು ದೇಶದ ಆಸ್ತಿ ಎನ್ನುವ ಅರಿವಿನೊಂದಿಗೆ ಭಾರತ ದೇಶವೆ ನಮ್ಮ ಮೊದಲ ಆದ್ಯತೆಯಾಗಿರಲಿ ಎಂದು ಆಳ್ವಾಸ್ ಆಂಗ್ಲ ಮಾಧ್ಯಮ  ಶಾಲೆಯ ವಿದ್ಯಾರ್ಥಿ ಮಾಸ್ಟರ್ ವಿರಾಟ್ ಕೃಷ್ಣರವರು ಹೇಳಿದರು.

ಡಿ.20ರಂದು ಎರಡನೇ ದಿನ ಸುದಾನ ವಸತಿಯುತ ಶಾಲೆಯಲ್ಲಿ ನಡೆದ ಜ್ಯೂನಿಯರ್ ವಿಭಾಗದ ವಾರ್ಷಿಕೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸುದಾನ ಶಾಲೆಯು ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬೆಳೆಸುತ್ತದೆ-ಶಿವಾನಿ ಗೌಡ:
ಸಭಾಧ್ಯಕ್ಷತೆಯನ್ನು ವಹಿಸಿದ್ದ  ಸುದಾನ ಶಾಲೆಯ ಹಿರಿಯ ವಿದ್ಯಾರ್ಥಿನಿ ಡಾ ಶಿವಾನಿ ಡಿ ಗೌಡರವರು ಶಾಲೆಯೊಂದಿಗಿನ ತಮ್ಮ ಒಡನಾಟದ ಬಗ್ಗೆ ಮಾತನಾಡಿ, ಉತ್ತಮ ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುತ್ತಾರೆ. ಸುದಾನ ಶಾಲೆಯು ಸದಾ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬೆಳೆಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸದಾ ಶ್ರಮಿಸುತ್ತದೆ. ಇದರಿಂದಾಗಿ ಸಮಾಜದಲ್ಲಿ  ಬೆರೆತು ಬಾಳುವುದು ಸುಲಭವಾಗುತ್ತದೆ. ಪೋಷಕರು  ಮಕ್ಕಳನ್ನು  ಶಾಲಾ ಕಲಿಕೆಯ ಜೊತೆಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಕೊಳ್ಳಲು ಪ್ರೋತ್ಸಾಹಿಸಬೇಕು. ಭವಿಷ್ಯದಲ್ಲಿ ಸಂತೃಪ್ತಿಯಿಂದ ಬಾಳಲು ಇದು ಅತ್ಯಂತ ಸಹಕಾರಿ ಎಂದರು.

ಶಾಲಾ ವಿದ್ಯಾರ್ಥಿ ನಾಯಕ ವಿಸ್ಮಯ್ ಸ್ವಾಗತಿಸಿ, ಶಾಲೆಯ ವಿರೋಧ ಪಕ್ಷದ ನಾಯಕಿ ಕು. ಪಲ್ಲವಿ ಜಿ ವಂದಿಸಿದರು. ಶಾಲಾ ವಿದ್ಯಾರ್ಥಿ ಉಪ ನಾಯಕಿ ಲೆನೋರಾ ಸ್ಯಾನ್ಸಿಯ ಪಿಂಟೊ, ವಿದ್ಯಾರ್ಥಿ ಕಾರ್ಯದರ್ಶಿ ವಿಕಾಸ್ ರಾಥೋಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಸದಸ್ಯರಾದ ಉಜ್ವಲ್ ಎಂ, ಫಾತಿಮತ್ ಶನಮ್, ಇಜಾಮ್ ಶೇಖ್, ನಿಹಾರಿಕಾ, ಪ್ರನಿಕಾ ಪಿ.ಎಂರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಶಾಲಾ ಸಂಚಾಲಕ ರೆ|ವಿಜಯ ಹಾರ್ವಿನ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ರವರು ಸಾಧಕರನ್ನು ಗೌರವಿಸಿದರು. ಸಾಧಕರ ಸನ್ಮಾನದ ಪರಿಚಯವನ್ನು ಶಾಲಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗಾಯತ್ರಿ ಕೆ.ರವರು ನೀಡಿದರು. ಸಹ ಶಿಕ್ಷಕರಾದ ನಿಶ್ಮಿತಾ ಮತ್ತು ಜಯಸ್ಮಿತಾ ಎಸ್ ಕೆ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗಾರಾಜ್, ಮಕ್ಕಳ ಸುರಕ್ಷ ಸಮಿತಿ ಅಧ್ಯಕ್ಷ ಮಾಮಚ್ಚನ್ ಎಂ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ವಿನಿತಾ ಶೆಟ್ಟಿ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕಾ ಕಾರ್ಯಕ್ರಮವು ನಡೆಯಿತು.  ವಿದ್ಯಾರ್ಥಿಗಳಾದ ಅಭಿಜ್ಞಾ, ಮನೀಶ್ ಶೆಟ್ಟಿ, ಲೆನೋರಾ ಮತ್ತು ವಂಶಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು.

ಕಿರು ಪ್ರಹಸನ..
ಪ್ರತಿವರ್ಷವೂ ಒಂದು ಧ್ಯೇಯ ವಾಕ್ಯಕ್ಕೆ ಅನುಗುಣವಾಗಿ ಕಾರ್ಯಕ್ರಮವನ್ನು ಆಯೋಜಿಸುವ ಶಾಲೆಯು ಈ ವರ್ಷ ‘ಮೌಲ್ಯಗಳೊಂದಿಗೆ ಬಾಳೋಣ ಇತರರನ್ನೂ ಬಾಳಲು ಬಿಡೋಣ’ ಎಂಬ ಧ್ಯೇಯವಾಕ್ಯವನ್ನು ಇರಿಸಿಕೊಂಡಿದೆ. ಈ ಧ್ಯೇಯಕ್ಕೆ ಸಂಬಂಧಿಸಿದಂತೆ ರೂಪಿಸಿದ್ದ ಭವ್ಯ ಮೆರವಣಿಗೆಯಲ್ಲಿ ಧೃತಿ ಆರ್.ರೈ ರಚನೆಯ, ಬಕುಳಾರವರ ಪರಿಕಲ್ಪನೆಯ ‘ನಿಜವಾದ ವಿಕಸನ’ ಕಿರು ಪ್ರಹಸನ ಪ್ರದರ್ಶಿಸಲಾಯಿತು.

ವಿಶೇಷ ಸಾಧಕರಿಗೆ ಗೌರವ..
ರಾಜ್ಯ/ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿಶೇಷ ಸಾಧಕರ ಪೈಕಿ ರಾಜ್ಯಮಟ್ಟದಲ್ಲಿ ಅಕ್ಷರ ರೈ(2ನೇ), ಅದ್ವಿಕ್ ವಿ(2ನೇ), ಶ್ರೀಯಾ ಪಿ ಭಂಡಾರಿ(2ನೇ), ಅಪೂರ್ವ ಅದಿಕ್ ರಾವ್ ಕಡಮ(3ನೇ), ಪೂರ್ವಿಕಾ ಎಸ್ ಎಚ್(3ನೇ), ಫಾತಿಮಾ ಲಿಜಾ(4ನೇ), ತರುಷ್ ಪಿ ಕೆ(4ನೇ), ಆನಿಯಾ ಮರಿಯಮ್(5ನೇ), ಸಂಭ್ರಮ್ ಎನ್ ವಿ (5ನೇ), ಆದಿತ್ಯ ಸಿದ್ದಾರ್ಥ ಬೌದ್ಧ್(6ನೇ),ದ್ಯುತಿ ಜೆ ಎ(6ನೇ), ಅಯಫಾತಿಮಾ(6ನೇ), ಅನಿಶ್ ಎಂ ಎಚ್(7ನೇ), ಆಯುರ್ ವರ್ಷ(7ನೇ), ರಾಷ್ಟಮಟ್ಟದಲ್ಲಿ ಅಮೋಘ ಕೆ(3ನೇ), ಅಶೆರ್ ಸುಶಾಂತ್ ಟೈದೆ(3ನೇ),, ಮುಹಮ್ಮದ್ ಶೀಸ್ ಯುಸುಫ್(3ನೇ), ನೇಹಾ ಅಶ್ರಫ್(6ನೇ), ದಿಯಾ ಎಚ್ ಸಿ ಮಾಲ್(6ನೇ), ಮುಹಮ್ಮದ್ ರಾಯಿಫ್ ಖಾನ್(6ನೇ), ವಿಶ್ವಾಸ ನಾರಾಯಣ ಭಟ್ ಗುಂಡಿಗದ್ದೆ(6ನೇ), ಅರ್ಹಮ್ ಶಬಾಬ್(7ನೇ)ರವರುಗಳನ್ನು ಅಭಿನಂದಿಸಲಾಯಿತು.

ಇಂದು ಶಾಲೆಯಲ್ಲಿ..
ಡಿ.21ರಂದು ಮೂರನೇ ದಿನ ತರಗತಿ ಆರರಿಂದ ಎಸೆಸ್ಸೆಲ್ಸಿವರೆಗೆ ಹಾಗೂ ಹಿರಿಯ ವಿದ್ಯಾರ್ಥಿಗಳ ವಾರ್ಷಿಕೋತ್ಸವ ನಡೆಯಲಿದ್ದು ತೆಂಕಿಲ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಮಧುರಾ ಕೆ.ರವರು ಮುಖ್ಯ ಅಭ್ಯಾಗತರಾಗಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುಶಾಂತ್ ಹಾರ್ವಿನ್, ಉಪಾಧ್ಯಕ್ಷ ಬಿಂದು ಸಾಗರ್, ಕಾರ್ಯದರ್ಶಿ ಸತ್ಯಾತ್ಮ, ಕೋಶಾಧಿಕಾರಿ ಹರ್ಷಿತ್ ಎಂ.ಬಿ.ರವರು ಪಾಲ್ಗೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here