ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತೆಗೆಯಲು ಕಲಿಕಾ ಹಬ್ಬ ಸಹಕಾರಿ-ಲೋಕಯ್ಯ ಪರವ

0

ಪುತ್ತೂರು: ಮಕ್ಕಳು ತರಗತಿ ಕೋಣೆಯಲ್ಲಿ ಕಲಿಯುವುದಕ್ಕಿಂತ ಹೆಚ್ಚು ಹೊರಪ್ರಪಂಚದಲ್ಲಿ ಕಲಿಯುತ್ತಾರೆ. ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತೆಗೆಯಲು ಕಲಿಕಾ ಹಬ್ಬ ಸಹಕಾರಿ ಎಂದು ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ಲೋಕಯ್ಯ ಪರವ ಹೇಳಿದರು.

ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೋಳ್ಪಾಡಿಯಲ್ಲಿ ನಡೆದ ಕಾಣಿಯೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಯಾನಂದ ಕೂರೇಲು ವಹಿಸಿದ್ದರು. ವೇದಿಕೆಯಲ್ಲಿ ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ದೇವಿಪ್ರಸಾದ್ ದೋಳ್ಪಾಡಿ ನಾಣಿಲ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ಪದ್ಮಯ್ಯ ಗೌಡ ಸಂಪನ್ಮೂಲ ವ್ಯಕ್ತಿಗಳಾದ ಓಬಲೇಶ್, ಸುಜಾತಾ ಎ, ಸಂಧ್ಯಾ, ವಾಣಿ ಎ, ಭಾಗೀರಥಿ,ದಯಾಮಣಿ,ಜುನಾಫ್ ಶಾಲಾ ಮುಖ್ಯಗುರು ಜಯಣ್ಣ ಉಪಸ್ಥಿತರಿದ್ದರು.

ಕಾಣಿಯೂರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ್ ವೈ ಪ್ರಾಸ್ತಾವಿಕ ಮಾತನಾಡಿದರು.ಶಾಲಾ ಶಿಕ್ಷಕಿ ಚಂಚಲಾಕ್ಷಿ ಸ್ವಾಗತಿಸಿ ಸಹಶಿಕ್ಷಕ ಜಯರಾಜ್ ವಂದಿಸಿದರು. ಸಹಶಿಕ್ಷಕಿಯರಾದ ಕಲಾವತಿ, ಚಿತ್ರಾ ಕೆ ಸಹಕರಿಸಿದರು. ಸಹಶಿಕ್ಷಕಿ ದೀಪಿಕಾ ನಿರೂಪಿಸಿದರು. ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಂಬಾಕ್ಷಿ ಕೂರೇಲು ಬಹುಮಾನ ವಿತರಣೆ ಮಾಡಿದರು.ಬೊಬ್ಬೆಕೇರಿ ಶಾಲಾ ಮುಖ್ಯಗುರು ಶಶಿಕಲಾ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೇದವ್ಯಾಸ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here