ನುಳಿಯಾಲು-ನಡ್ಯೇಲು ಸಂಜೀವ ಶೆಟ್ಟಿರವರ ಶ್ರದ್ಧಾಂಜಲಿ ನುಡಿನಮನ

0

ಪರೋಪಕಾರಿ, ಸುಖೀ ಸಂಸಾರಿಯಾಗಿ ಸಂಜೀವ ಶೆಟ್ಟಿರವರ ಜೀವನ-ಜಯರಾಮ ರೈ

ಸಂಜೀವ ಶೆಟ್ಟಿರವರದ್ದು ಶ್ರಮಜೀವಿ ಬದುಕು, ಎಲ್ಲರಿಗೂ ಆದರ್ಶ-ಅಶೋಕ್ ಶೆಟ್ಟಿ

ಪುತ್ತೂರು: ಇತ್ತೀಚೆಗೆ ನಿಧನರಾದ ರಾಮಣ್ಣ ಶೆಟ್ಟಿ ನಡ್ಯೇಲು ಹಾಗೂ ಯಮುನಾ ಶೆಟ್ಟಿ ನುಳಿಯಾಲುರವರ ಪುತ್ರ ಕಡೇಶಿವಾಲಯ ನಡ್ಯೇಲು ಸಂಜೀವ ಶೆಟ್ಟಿರವರ ಶ್ರದ್ಧಾಂಜಲಿ ನುಡಿನಮನ ಕಾರ್ಯಕ್ರಮವು ಡಿ.28ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ನೆರವೇರಿತು.

ಸಂಜೀವ ಶೆಟ್ಟಿರವರದ್ದು ಪರೋಪಕಾರಿ, ಸುಖೀ ಸಂಸಾರಿಯಾಗಿ ಜೀವನ-ಜಯರಾಮ ರೈ:
ಸಮಾಜಸೇವಕ ಹಾಗೂ ಕೃಷಿಕರಾದ ಪಾಚುಕೋಡಿ ಜಯರಾಮ ರೈರವರು ಮಾತನಾಡಿ, ಹುಟ್ಟು ಆಕಸ್ಮಿಕ ಆದರೆ ಸಾವು ನಿಶ್ಚಿತ ಆದರೆ ಹುಟ್ಟು-ಸಾವಿನ ನಡುವೆ ಮನುಷ್ಯ ಮಾಡುವ ಕಾರ್ಯಗಳು ಸದಾ ಶಾಶ್ವತ. ಹಿರಿಯರ ಸಂಪ್ರದಾಯದಂತೆ ಕಾರ್ಯಗಳನ್ನು ನೆರವೇರಿಸುವುದು ಸಂಪ್ರದಾಯವಾಗಿದೆ. ಸಾವಿನಲ್ಲಿ ಎರಡು ವಿಧಗಳಿದ್ದು ಒಂದು ಅಕಾಲ ಮರಣ ಮತ್ತೊಂದು ಸಕಾಲ ಸಾವು. ಸಣ್ಣ ಪ್ರಾಯದಲ್ಲಿ ಬರುವ ರೋಗರುಜಿನಗಳು, ಅಪಘಾತಗಳಿಂದ ಮೃತಪಟ್ಟರೆ ಅದು ಅಕಾಲ ಮರಣವಾಗಿದೆ. ಅಗಲಿದ ಸಂಜೀವಣ್ಣರವರು 61 ವರ್ಷ ಸುಖೀ ಸಂಸಾರಿಯಾಗಿ ಜೀವನ ನಡೆಸಿ ಇಂದು ನಮ್ಮನ್ನು ಅಗಲಿದ್ದಾರೆ. ಅಗಲಿದ ಸಂಜೀವಣ್ಣರವರ ಅಗಲಿಕೆಯ ನೋವನ್ನು ಭರಿಸಲು ಅವರ ತಾಯಿ, ಮಗಳಿಗೆ ಹಾಗೂ ಕುಟುಂಬಸ್ಥರಿಗೆ ದೇವರು ಅನುಗ್ರಹಿಸಲಿ ಎಂದು ಹೇಳಿ ನುಡಿನಮನ ಸಲ್ಲಿಸಿದರು.


ಸಂಜೀವ ಶೆಟ್ಟಿರವರದ್ದು ಶ್ರಮಜೀವಿ ಬದುಕು, ಎಲ್ಲರಿಗೂ ಆದರ್ಶ-ಅಶೋಕ್ ಶೆಟ್ಟಿ:
ಖ್ಯಾತ ಯಕ್ಷಗಾನ ಕಲಾವಿದ. ಹಿರಿಯರಾದ ಸರಪಾಡಿ ಅಶೋಕ್ ಶೆಟ್ಟಿರವರು ಮಾತನಾಡಿ, ಕುಟುಂಬದ ಸದಸ್ಯನಾಗಿ ಊರವರೊಂದಿಗೆ ಬೆರೆತು ಒಳ್ಳೆಯ ವ್ಯಕ್ತಿಯಾಗಿ ಸಮಾಜದಲ್ಲಿ ಜೀವಿಸುವುದು ಅತೀ ಮುಖ್ಯ. ಆ ಕೆಲಸವನ್ನು ಅಗಲಿದ ಸಂಜೀವ ಶೆಟ್ಟಿರವರು ಮಾಡಿದ್ದಾರೆ. ಯಾರಿಗೂ ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದ ಆಗಲು ಸಾಧ್ಯವಿಲ್ಲ ಆದರೆ ಮನುಷ್ಯ ತನ್ನ ಜೀವನದುದ್ದಕ್ಕೂ ಪರೋಪಕಾರಿಯಾಗಿ, ಸ್ವಾರ್ಥರಹಿತ ಬದುಕಿನೊಂದಿಗೆ ಜೀವಿಸಿದಾಗ ಬದುಕು ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಸಂಜೀವ ಶೆಟ್ಟಿರವರು ತನ್ನ ಬದುಕಿನುದ್ದಕ್ಕೂ ಶ್ರಮಜೀವಿಯಾಗಿ ಬದುಕಿ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಖಂಡಿತ ಎಂದು ಹೇಳಿ ಅಗಲಿದ ಸಂಜೀವ ಶೆಟ್ಟಿರವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.


ಈ ಸಂದರ್ಭದಲ್ಲಿ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಉದ್ಯಮಿ ಮೋಹನ್ ಕರ್ನೂರ್ ಮುಂಬಯಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಟೊಟ್ಟು, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಅನಿತಾ ಹೇಮನಾಥ ಶೆಟ್ಟಿ, ಭವಾನಿ ಶಿಪ್ಪಿಂಗ್ ಕಂಪೆನಿಯ ಕುಸುಮಾಧರ ಡಿ ಶೆಟ್ಟಿ, ಮುರಳೀಧರ ರೈ ಮಠಂತಬೆಟ್ಟು, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಹರ್ಷದ್ ಶೆಟ್ಟಿ ಸರಪಾಡಿ, ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಅಗಲಿದ ಸಂಜೀವ ಶೆಟ್ಟಿ ನಡ್ಯೇಲುರವರ ಪತ್ನಿ ಮಾಲತಿ ಶೆಟ್ಟಿ, ಪುತ್ರಿ ಸಂಪ್ರೀತಿ ಶೆಟ್ಟಿ, ಸಹೋದರರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಪುರುಷೋತ್ತಮ ಶೆಟ್ಟಿ ನುಳಿಯಾಲು, ದಯಾನಂದ ಶೆಟ್ಟಿ ನುಳಿಯಾಲು, ಸಹೋದರಿ ನುಳಿಯಾಲು ಕೃಷ್ಣವೇಣಿ ಶೆಟ್ಟಿ ಸಹಿತ ಅಗಲಿದ ಸಂಜೀವ ಶೆಟ್ಟಿರವರ ನುಳಿಯಾಲು ಹಾಗೂ ಕಡ್ಯೇಲು ಕುಟುಂಬಸ್ಥರು, ಬಂಧುಮಿತ್ರರು, ಹಿತೈಷಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here