






ಕುರುಹಿನ ಶೆಟ್ಟಿ ಸಂಘದ ಬೆಳ್ಳಿಹಬ್ಬ ಪ್ರಯುಕ್ತ ನೇಕಾರ ಕ್ರೀಡಾ ಕಲರವ-2025 ಡಿ.28ರಂದು ಪುತ್ತೂರಿನ ಸಂಪ್ಯದ ಸಂಘದ ವಠಾರದಲ್ಲಿ ನಡೆಯಿತು.



ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕುರುಹಿನ ಶೆಟ್ಟಿ ಸಂಘದವರ ಯಾವುದೇ ಬೇಡಿಕೆಗಳಿದ್ದರೆ ಅದನ್ನು ಬಗೆಹರಿಸುವಲ್ಲಿ ನಾನು ನಿಮ್ಮೊಂದಿಗಿದ್ದೇನೆ. ನೀವೂ ನಮ್ಮನ್ನು ಬೆಂಬಲಿಸಬೇಕು ಎಂದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಶಾಸಕರನ್ನು ಗೌರವಿಸಲಾಯಿತು. ಬಳಿಕ ಮನವಿ ನೀಡಲಾಯಿತು. ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ಕರಿಮೊಗರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಕುಂಟಲ್ಪಾಡಿ ದೀಪ ಪ್ರಜ್ವಲನೆ ಮಾಡಿದರು. ಆರ್ಯಾಪು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಗೀತಾ ಹೆಚ್ ಅತಿಥಿಯಾಗಿ ಭಾಗವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಸೀತಾರಾಮ ನೆಟ್ಟಾರು, ಸಂಘಟನಾ ಕಾರ್ಯದರ್ಶಿ ಕುಶಾಲಪ್ಪ ಶೆಟ್ಟಿ, ಮಾಜಿ ಅಧ್ಯಕ್ಷ ಶ್ರೀನಿವಾಸ ಕುಂಟಲ್ಪಾಡಿ, ಉಪಾಧ್ಯಕ್ಷ ಸುರೇಶ್ ಬೆಳಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜ್ಯ ಸಮಿತಿ ಪದಾಧಿಕಾರಿ ರಘುನಾಥ ಬಿ.ಎಸ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಶ್ವಿತಾ ಬೆಳ್ಳಾರೆ ವಂದಿಸಿದರು. ಸಮಾಜ ಬಾಂಧವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.












