ಸುಳ್ಯ ಸುದ್ದಿ ಬಿಡುಗಡೆ, ಬೆಳ್ತಂಗಡಿ ಸುದ್ದಿಬಿಡುಗಡೆ, ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಸುದ್ದಿ ನ್ಯೂಸ್ ಚ್ಯಾನೆಲ್ ದೇಶದಲ್ಲೇ ವಿಶಿಷ್ಟತೆ ಉಳ್ಳ ಮಾಧ್ಯಮವಾಗಿದೆ

0

ಸುಳ್ಯ ,ಪುತ್ತೂರು ,ಬೆಳ್ತಂಗಡಿ ತಾಲೂಕಿನಲ್ಲಿರುವ ಎಲ್ಲಾ ಪತ್ರಿಕೆಗಳಿಗಿಂತ ಹೆಚ್ಚು ಪ್ರಸಾರ, ಓದುಗರ ಸಂಖ್ಯೆಯನ್ನು ಸುದ್ದಿಬಿಡುಗಡೆ ಪತ್ರಿಕೆ, ವೀಕ್ಷಕರ ಸಂಖ್ಯೆಯನ್ನು ಸುದ್ದಿ ಚಾನೆಲ್ ಹೊಂದಿವೆ ಯಾಕೆಂದರೆ


*ಸುದ್ದಿ ಬಿಡುಗಡೆಯಲ್ಲಿ ಐಶ್ವರ್ಯ ರೈಯ , ಅಂಬಾನಿ ಮಗನ ಮದುವೆ ಸುದ್ದಿ ಬರಲಿಲ್ಲ.
*ನಮ್ಮ ಊರಿನ ಯುವತಿ ಯುವಕನ ವಿವಾಹದ ಸುದ್ದಿ ಫೋಟೋ ಸಹಿತ ಉಚಿತವಾಗಿ ಬರುತ್ತದೆ.
*ಇಂದಿರಾ ಗಾಂಧಿ, ವಾಜಪೇಯಿ ನಿಧನದ ಸುದ್ದಿ ಬರಲಿಲ್ಲ. ಊರಿನ ಕಡು ಬಡವನ.ಶೋಶಿತನ ನಿಧನದ ಸುದ್ದಿ ಉಚಿತವಾಗಿ ಬರುತ್ತದೆ.
*ಶಾಸಕರ, ಪ್ರತಿಯೊಂದು ಪ್ರಮುಖ ಇಲಾಖೆಯ ಕಾರ್ಯಕ್ರಮದ ಸುದ್ದಿ ಉಚಿತವಾಗಿ ಬರುತ್ತದೆ.
*ಊರಿನಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದ ಸುದ್ದಿ ಉಚಿತವಾಗಿ ಬರುತ್ತದೆ.
*ಪರ ಊರಿನಲ್ಲಿರುವ ಊರಿನವರ ಸುದ್ದಿ,. ಸಾಧಕರ ಸುದ್ದಿ,ಮರೆಯಾದ ಊರಿನ ಸಾಧಕರ ಸುದ್ದಿ ಬರುತ್ತದೆ..
*ಪಕ್ಷ, ಜಾತಿ, ಧರ್ಮ ಭಾಷೆ,ಬಡವ ಶ್ರೀಮಂತ ಎಂಬ ಬೇಧವಿಲ್ಲದೆ ಜನಪರ ,ನಿಷ್ಪಕ್ಷಪಾತ ವರದಿ ಬರುತ್ತದೆ.
*ಜಗತ್ತಿನಲ್ಲಿ ಎಲ್ಲೆಡೆ ಇರುವ ಸುಳ್ಯದವರು, ಬೆಳ್ತಂಗಡಿಯವರು, ಪುತ್ತೂರಿನವರು ಓದುವ ಅತೀ ಹೆಚ್ಚು ಪ್ರಸಾರದ ಪತ್ರಿಕೆಯಾಗಿದೆ.
*ಇದೀಗ ಜನರನ್ನು ರಾಜರನ್ನಾಗಿ ಮಾಡಿ ಜನಪ್ರತಿನಿಧಿಗಳನ್ನು ಅಧಿಕಾರಿಗಳನ್ನು ಜನಸೇವಕರನ್ನಾಗಿಸುವ ಪ್ರಯತ್ನದ ಅಂಗವಾಗಿ ತಾಲೂಕಿನಲ್ಲಿರುವ ಎಲ್ಲಾ ಇಲಾಖೆಗಳ ಮಾಹಿತಿ ಕಾರ್ಯಕ್ರಮ ಗ್ರಾಮದ ಮನೆಮನೆಗೆ ಮುಟ್ಟುವಂತೆ ಮಾಡಲಿದ್ದೇವೆ
*ತಾಲೂಕಿನ ಸಮಗ್ರ ಮಾಹಿತಿ, ಸೇವೆ ,ಕಸುಬು, ಉದ್ಯ ಮವನ್ನು ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವ ಜಾಗತೀಕರಣಗೊಳಿಸುವ ಕಾರ್ಯ ನಡೆಯುತ್ತಿದೆ.
*ಊರಿನ (ತಾಲೂಕಿನ) ಸಮಗ್ರ ಅಬಿವೃದ್ದಿಗೆ ಪೂರಕವಾಗಿ . ಸಾಮರಸ್ಯದ ಜೀವನಕ್ಕಾಗಿ ನಮ್ಮೂರನ್ನು ನಮ್ಮ ಹೆಮ್ಮೆಯ ಊರನ್ನಾಗಿ, ತಾಲೂಕನ್ನಾಗಿ ಮಾಡುವ ಪ್ರಯತ್ನಕ್ಕೆ ಕೈ ಹಾಕಲಿದ್ದೇವೆ.


ಹೊಸ ವರ್ಷ ಊರಿನ ಎಲ್ಲರಿಗೂ (ತಾಲೂಕಿನ) ಸುಖ ಸಂತೋಷ ಆರೋಗ್ಯ ಸಂಪತ್ತು ನೀಡುವಂತಾಗಲಿ ಎಂದು ಹಾರೈಸುತ್ತೇನೆ | ಡಾ.ಯು.ಪಿ. ಶಿವಾನಂದ

LEAVE A REPLY

Please enter your comment!
Please enter your name here