ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ

0

ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಯಶಸ್ಸು ಖಂಡಿತ – ಅಗರಿ ನವೀನ್ ಭಂಡಾರಿ


ಆಲಂಕಾರು:ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಡಿ.26 ರಂದು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮನೋಹರ ಪ್ರಕಾಶ್ ಧ್ವಜಾರೋಹಣ ನೆರೆವೆರಿಸಿದರು.ಸಭಾಧ್ಯಕ್ಷತೆಯನ್ನು ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಈಶ್ವರ ಗೌಡ ಪಜ್ಜಡ್ಕ ವಹಿಸಿದ್ದರು.


ಅತಿಥಿಗಳಾಗಿ ಆಲಂಕಾರು ಮೆಸ್ಕಾಂ ಶಾಖಾಧಿಕಾರಿ ಪ್ರೇಮ್ ಕುಮಾರ್, ಪೆರಾಬೆ ಗ್ರಾ.ಪಂ ಸದಸ್ಯರಾದ ಮಮತಾ ಶೆಟ್ಟಿ ಅಂಬರಾಜೆ ಶುಭಹಾರೈಸಿದರು. ರಾತ್ರಿ ದುರ್ಗಾಂಬಾ ವಿದ್ಯಾಸಂಸ್ಥೆಯಲ್ಲಿರುವ ಸರಸ್ವತಿ ದೇವಿಯ ಪ್ರತಿಮೆಯ ಮುಂಭಾಗದಲ್ಲಿ ದೀಪ ಪ್ರಜ್ವಲನೆ ಮಾಡಿದ ನಂತರ ಸಭಾ ಕಾರ್ಯಕ್ರಮ ನಡೆಯಿತು.

ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಆಗರಿ ನವೀನ್ ಭಂಡಾರಿಯವರು ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಬೇಕು, ಐ.ಎ.ಎಸ್,ಐ.ಪಿ.ಎಸ್.ಐ.ಎಫ್.ಎಸ್ ಪರೀಕ್ಷೆಗಳನ್ನು ಬರೆದು ಉನ್ನತ ಸ್ಥಾನವನ್ನು ಪಡೆಯಬೇಕು. ಆತ್ಮವಿಶ್ವಾಸದಿಂದ ಮುನ್ನುಗ್ಗಿದಾಗ ಯಶಸ್ಸು ಖಂಡಿತ ದೊರೆಯುತ್ತದೆ.ಗ್ರಾಮೀಣ ಭಾಗದಲ್ಲಿರುವ ದುರ್ಗಾಂಬಾ ವಿದ್ಯಾಸಂಸ್ಥೆ ಯ ಮಕ್ಕಳು ರಾಜ್ಯ,ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾರೆ. ದುರ್ಗಾಂಬಾ ವಿದ್ಯಾಸಂಸ್ಥೆ ರಾಜ್ಯಪ್ರಶಸ್ತಿ ಪಡೆಯಲು ಅರ್ಹರಾಗಿರುವ ವಿದ್ಯಾಸಂಸ್ಥೆ ಎಂದರು.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕಿ ಪ್ರಾಧ್ಯಾಪಕಿ ಡಾ. ಸೌಮ್ಯ ನಿರಂಜನ ರೈ ಮಾತನಾಡಿ ಕಾಲೇಜಿನ ವಾರ್ಷಿಕೋತ್ಸವ ಮಕ್ಕಳಲ್ಲಿ ಹುದುಗಿರುವ ಸೂಕ್ತ ಪ್ರತಿಭೆಗಳನ್ನು ಹೊರಹೊಮ್ಮಲು,ಆತ್ಮವಿಶ್ವಾಸ ವನ್ನು ಹೆಚ್ಚಿಸಲು,ಅವರಲ್ಲಿರುವ ಮಧುರ ನೆನಪುಗಳನ್ನು ಹೊರ ಹೊಮ್ಮಿಸಲು ವಾರ್ಷಿಕೋತ್ಸವ ತುಂಬಾ ಸಹಕಾರಿಯಾಗುತ್ತದೆ.ಕಾಲೇಜು ಜೀವನ ಪ್ರತಿಯೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಭವಿಷ್ಯದ ಅಡಿಪಾಯ. ಸ್ವ ಅರಿವು,ಶಿಸ್ತುಪರಿಶ್ರಮ,ಕಷ್ಟಗಳು ಬಂದಾಗ ನಿರಾಶರಾಗದೇ,ಮೌಲ್ಯ,ನೈತಿಕತೆ,ಕೌಶಲ್ಯ ವಿಕಾಸ,ತಂತ್ರಜ್ಞಾನದ ಅರಿವು,ಸಮಾಜದ ಬಗ್ಗೆ ಕಾಳಜಿಯೊಂದಿಗೆ ಸಮಾಜದ ಪ್ರಗತಿಯಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು.


ಸಿ.ಆರ್.ಪಿ ಪ್ರಕಾಶ್ ಬಾಕಿಲರವರು ಮಾತನಾಡಿ, ಶ್ರೀ ದುರ್ಗಾಂಬಾ ವಿದ್ಯಾಸಂಸ್ಥೆ 100% ಫಲಿತಾಂಶ ಪಡೆಯುವ ಮೂಲಕ ಈ ವಿದ್ಯಾಸಂಸ್ಥೆಯ ಇತಿಹಾಸ ಮರುಕಳಿಸಿದೆ ಎಂದು ತಿಳಿಸಿ ಈ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಶೈಕ್ಷಣಿಕ, ಕ್ರೀಡಾ,ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದನ್ನು ಕಂಡು ಅತೀವ ಸಂತಸವಾಗುತ್ತಿದೆ ಎಂದರು.


ಸಭಾಧ್ಯಕ್ಷತೆ ವಹಿಸಿದ ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ, ದುರ್ಗಾಂಬಾ ವಿದ್ಯಾಸಂಸ್ಥೆ ಎಲ್ಲರ ಅವಿರತ ಶ್ರಮದಿಂದಾಗಿ‌ ಶೈಕ್ಷಣಿಕ, ಕ್ರೀಡಾ,ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು 100% ಫಲಿತಾಂಶ ತರುವ ಮೂಲಕ ದುರ್ಗಾಂಬಾ ವಿದ್ಯಾಸಂಸ್ಥೆಯ ಕೀರ್ತಿಯನ್ನು ಬೆಳಗಿದ್ದಾರೆ.ಪ್ರತಿಭಾನ್ವಿತ ವಿದ್ಯಾರ್ಥಿಗಳು ದೂರ ದೂರದ ವಿದ್ಯಾಸಂಸ್ಥೆಗಳಿಗೆ ಹೋಗುತ್ತಾರೆ ಮಾಧ್ಯಮ, ಬಡ ಶ್ರೇಯಾಂಕದ ವಿದ್ಯಾರ್ಥಿಗಳು ಗ್ರಾಮೀಣ ವಿದ್ಯಾಸಂಸ್ಥೆಗೆ ಬರುತ್ತಾರೆ ಅವರಿಗೆ ಬೋಧಿಸಿ 100% ಫಲಿತಾಂಶ ಬರುವಂತೆ ಮಾಡುವುದು ನಿಜವಾಗಿ ಶ್ಲಾಘನೀಯ ಕೆಲಸವಾಗಿದೆ ಎಂದರು.

ಸಭಾಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಶೈಕ್ಷಣಿಕ, ಕ್ರೀಡಾ,ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಪಂದ್ಯಾಟದ ಬಹುಮಾನವನ್ನು ಸಭೆಯಲ್ಲಿ ವಿತರಿಸಲಾಯಿತು.

ಕಾಲೇಜಿನ ಬೋಧಕವರ್ಗದ ನಿವ್ಯ ಪಿ.ಎನ್ ಪಿ,ಶಶಿಕಲಾ.ಜೆ,ಶ್ರೇಯಸ್ ರೈ ಬಹುಮಾನದ ಪಟ್ಟಿಯನ್ನು ವಾಚಿಸಿದರು. ದುರ್ಗಾಂಬಾ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಶ್ರೀಪತಿ ರಾವ್ ಸ್ವಾಗತಿಸಿ, ಮುಖ್ಯಗುರು ನವೀನ್ ಕುಮಾರ್ ರೈ ವರದಿವಾಚನ ಮಂಡಿಸಿ,ಜನಾರ್ಧನ್ ಕಾರ್ಯಕ್ರಮ ನಿರೂಪಿಸಿ, ಪ್ರಾಂಶುಪಾಲ ರೂಪ ಎಂ.ಟಿ ವಂದಿಸಿದರು. ವೇದಿಕೆಯಲ್ಲಿ ಆಲಂಕಾರು ಗ್ರಾ.ಪಂ ಅಧ್ಯಕ್ಷರಾದ ಸುಶೀಲ ಕೊಂಡಾಡಿ ಶ್ರೀ ದುರ್ಗಾಂಬಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಈಶ್ವರ ಗೌಡ ಪಜ್ಜಡ್ಕ ,ಸದಸ್ಯರಾದ ವಿಜಯಕುಮಾರ್ ರೈ ಮನವಳಿಕೆ, ಮುತ್ತಪ್ಪ ಪೂಜಾರಿ ನೈಯ್ಯಲ್ಗ,ಇಂದುಶೇಖರ ಶೆಟ್ಟಿ, ಸರೋಜ ಉಮೇಶ್ ರೈ ಮನವಳಿಕೆಗುತ್ತು, ರಾಮರಾಜ್ ನಗ್ರಿ,ಹೇಮಂತ್ ರೈ ಮನವಳಿಕೆಗುತ್ತು, ಪೂರ್ವ ವಿದ್ಯಾರ್ಥಿ ಸಂಘ ಸುಂದರ ಗೌಡ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀನಾಥ್ ಗೌಡ.ಪಿ,ಕಾಲೇಜು ನಾಯಕಿ ಮಧುಶ್ರೀ ಉಪಸ್ಥಿತರಿದ್ದರು.ಶ್ರೀ ದುರ್ಗಾಂಬಾ ವಿದ್ಯಾಸಂಸ್ಥೆ ಯ ಬೋದಕ,ಬೋದಕೇತರ ವರ್ಗ ಸಹಕರಿಸಿದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here