ಕುಂಡ್ಕಡ್ಕ ಬಿಲ್ಲವ ಸಂಘದಿಂದ ಗಣಪತಿ ಹವನ,ಗುರುದೇವ ಪೂಜೆ:ಸಾಧಕರಿಗೆ ಸನ್ಮಾನ,ಸಮುದಾಯ ಭವನದ ಶೌಚಾಲಯಗಳ ಉದ್ಘಾಟನೆ

0

ವಿಟ್ಲ: ಕುಂಡಡ್ಕ ಬಿಲ್ಲವ ಸಂಘದ ವತಿಯಿಂದ ಗಣಪತಿ ಹವನ, ಬ್ರಹ್ಮಶ್ರೀ ನಾರಾಯಣ ಗುರುದೇವ ಪೂಜೆ,ಸಾಧಕರಿಗೆ ಸನ್ಮಾನ ಕುಂಡಡ್ಕದ ಗುರುನಗರದಲ್ಲಿರುವ ಬ್ರಹ್ಮಶ್ರೀ ನಾರಾಯಣಗುರುದೇವ ಸಮುದಾಯ ಭವನದಲ್ಲಿ ನಡೆಯಿತು.

ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಸಂಘದ ರಾಜ್ಯಾಧ್ಯಕ್ಷ ಸೈದಪ್ಪ ಕೆ.ಗುತ್ತೇದಾರ್ ಅವರು ಸಮಾರಂಭ ಉದ್ಘಾಟಿಸಿ,ಬೆಂಗಳೂರುನಲ್ಲಿ ನಡೆಯಲಿರುವ ಕೋಟಿ ಚೆನ್ನಯ ವಿಶ್ವ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿಯನ್ನು ದ.ಕ.ಜಿಲ್ಲೆಯಿಂದ ಬೆಂಗಳೂರುಗೆ ತರುವ ಕೆಲಸವಾಗಲಿದೆ ಎಂದು ಹೇಳಿ ಶುಭಹಾರೈಸಿದರು.

ವಕೀಲರು ಮತ್ತು ನೋಟರಿ ಪದ್ಮನಾಭ ಪೂಜಾರಿ, ಸಂಘಟನೆಗಳ ಮೂಲಕ ರಚನಾತ್ಮಕ ಕಾರ್ಯಗಳು ನಡೆಯಲಿ ಎಂದು ಹೇಳಿದರು.ಕುಂಡಡ್ಕ ಬಿಲ್ಲವ ಸಂಘದ ಅಧ್ಯಕ್ಷ ವಿನೋದ್ ಕುಮಾರ್ ಬೋಳಿಗದ್ದೆ ಅಧ್ಯಕ್ಷತೆ ವಹಿಸಿದ್ದರು.ವಿಟ್ಲ ಯುವವಾಹಿನಿ ಅಧ್ಯಕ್ಷ ಕೆ.ಟಿ.ಆನಂದ, ನಿಕಟಪೂರ್ವ ಅಧ್ಯಕ್ಷ ಹರೀಶ್ ಮರುವಾಳ,ಬೆಳ್ಳಿಹಬ್ಬ ಸಂಭ್ರಮ ಸಮಿತಿ ಸಂಚಾಲಕ ನವೀನ್ ಪಟ್ಲ, ಬ್ರಹ್ಮಶ್ರೀ ವಿವಿಧೋಧ್ದೇಶ ಸಹಕಾರ ಸಂಘದ ಅಧ್ಯಕ್ಷ ನಿಡ್ಯ ಸಂಜೀವ ಪೂಜಾರಿ,ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಜಯಪ್ರಕಾಶ್ ಪಾಣೆಮಜಲು, ಬೇರಿಕೆ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಎಲ್ಯಣ್ಣ ಪೂಜಾರಿ ಮೈರುಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶೌಚಾಲಯಗಳ ಉದ್ಘಾಟನೆ:
ಸಮುದಾಯ ಭವನದ ನೂತನ ಶೌಚಾಲಯಗಳ ಉದ್ಘಾಟನೆ ಇದೇ ಸಂದರ್ಭ ನಡೆಯಿತು.ಕಂಬಳ ಓಟಗಾರ ಕೆಮಣಾಜೆ ಕಿಶೋರ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.ನಾರಾಯಣ ಪೂಜಾರಿ ಎಸ್.ಕೆ.ಸ್ವಾಗತಿಸಿ, ಪ್ರಿಯಾಂಕಾದೀಕ್ಷಿತ್ ವಂದಿಸಿದರು.ಪಿಲಿಂಜ ನಾರಾಯಣ ಪೂಜಾರಿ ಮತ್ತು ಅವಿನಾಶ್ ಕಾರ್ಯಕ್ರಮ ನಿರ್ವಹಿಸಿದರು.ಶೋಭಾವಿಶ್ವನಾಥ, ರೇಣುಕಾ ಚೇತನ್ ಮರುವಾಳ,ಪ್ರಸಾದಿನಿ ಪೆರ್‍ವಾಜೆ ಮತ್ತಿತರರು ಸಹಕರಿಸಿದರು.

LEAVE A REPLY

Please enter your comment!
Please enter your name here