






ಪುತ್ತೂರು : ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವೊಂದು ಕಡೆ,ಬೇರೆ ಬೇರೆ ಊರಿನವರು ಕಸ ಬಿಸಾಡಿಕೊಂಡು ಹೋಗುವುದನ್ನು ತಡೆಹಿಡಿಯಲು ಕೋಡಿಂಬಾಡಿ ಗ್ರಾಮ ಪಂಚಾಯತ್ ಅನೇಕ ಕಾರ್ಯಕ್ರಮವನ್ನು ಅನುಸರಿಸಿತು, ಇದರೊಂದಿಗೆ ಗ್ರಾಮಪಂಚಾಯಿತಿಗೆ ಗ್ರಾಮ ಪುರಸ್ಕಾರ ಪ್ರಶಸ್ತಿಯೂ ಲಭಿಸಿತು, ಜೊತೆಗೆ 5,೦೦,೦೦೦ ವಿಶೇಷ ಅನುದಾನವೂ ಸರಕಾರದಿಂದ ದೊರೆಯಿತು. ಇನ್ನು ಕೂಡ ಬೇರೆ ಊರಿನವರು ಕಸ ಬಿಸಾಡುವುದನ್ನು ತಡೆಯಬೇಕೆಂಬ ದಿಟ್ಟ ನಿರ್ಧಾರದಿಂದ ಕಸ ಬಿಸಾಡುವ ಪ್ಯಾಕೆಟ್ಗಳನ್ನು ತೆಗೆದುಕೊಂಡು ಅದರಲ್ಲಿರುವ ಕುರುಹುಗಳನ್ನು ಪತ್ತೆ ಮಾಡುವ ಕಾರ್ಯವನ್ನು ಮುಂದುವರಿಸಲಾಗಿದೆ. ಕಳೆದ ವಾರ ಒಬ್ಬರಿಗೆ 3೦೦೦ ರೂ. ದಂಡ ವಿಧಿಸಿತು, ಇದೀಗ ದಾರಂದಕುಕ್ಕು ಪರಿಸರದ ಅಜ್ಜು ಮತ್ತು ಪುತ್ತೂರಿನ ಬ್ಯುಟಿ ಪಾರ್ಲರ್ನ ಯಶೋದಾ ಗೌಡ ಎಂಬವರ ವಿಳಾಸ ಪತ್ತೆಹಚ್ಚಲಾಗಿದೆ.


ಬ್ಯೂಟಿ ಪಾರ್ಲರ್ಗೆ ಸಂಬಂಧಪಟ್ಟ ಕಸಗಳು ಕೂಡ ಅದರಲ್ಲಿ ಲಭ್ಯವಾಗಿದೆ, ಸಂಪರ್ಕಕ್ಕೆ ಸಿಕ್ಕಿ ಸರಿಯಾಗಿ ಪಂಚಾಯಿತಿಗೆ ಸ್ಪಂದನೆ ಕೊಡದ ಕಾರಣ ಪೊಲೀಸರಿಗೆ ದೂರು ನೀಡಲಾಗಿದೆ ಮುಂದೆ ಇದಕ್ಕೆ ತಕ್ಕ ದೀರ್ಘವಾದ ಕ್ರಮವನ್ನು ತೆಗೆದುಕೊಳ್ಳುವುದಾಗಿ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಅವರು ತಿಳಿಸಿದರು. ದೂರು ಕೊಡುವ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಅಣ್ಣು ಅವರು ಉಪಸ್ಥಿತರಿದ್ದರು.













